ಎ.24ಕ್ಕೆ ದೇವದಾಸ್ ಲೀಲಾ ತುಳು ಸಿನೆಮಾ ತೆರೆಗೆ
ಮಂಗಳೂರು: ಜಯಂತಿ ಪ್ರೊಡಕ್ಷನ್ ನಡಿ ನಿರ್ಮಾಣಗೊಂಡಿರುವ ದೇವದಾಸ್‌ನ ಲೀಲಾ ತುಳು ಸಿನೆಮಾ ತುಳುನಾಡಿನಾದ್ಯಂತ ಎ. 24ರಂದು ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶ ತೇಜೇಶ್ ಪೂಜಾರಿ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಮಂಗಳೂರು, ಮುಡಿಪು, ಬಜ್ಪೆ ಹಾಗೂ ಬೆಂಗಳೂರಿನಲ್ಲಿ 35 ದಿನಗಳ ಕಾಲ ಚಿತ್ರೀಕರಣಗೊಂಡಿರುವ ಈ ಚಲನಚಿತ್ರದಲ್ಲಿ ಬಾಲಿವುಡ್ ಇಂಡಸ್ಟ್ರಿಯಲ್ಲಿ ಕೊರಿಯೋಗ್ರಾಫರ್ ಆಗಿ 25 ವರ್ಷಗಳ ಅನುಭವ ಹೊಂದಿರುವ ದೀಪಕ್ ಸಿಂಗ್ ತಮ್ಮ ಕೊಡುಗೆ ನೀಡಿದ್ದಾರೆ. ಚಿತ್ರದಲ್ಲಿ ಏಳು ಹಾಡುಗಳಿದ್ದು, ಗಾಯಕ ಶಾನ್ ಮೊದಲ ಬಾರಿಗೆ ತುಳು ಸಿನೆಮಾವಾದ ದೇವದಾಸ್‌ನ ಲೀಲಾದಲ್ಲಿ ಹಾಡಿದ್ದಾರೆ.
ಚಿತ್ರದಲ್ಲಿ ತೆಲಿಕೆದ ಬೊಲ್ಳಿ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ನವೀನ್ ಡಿ ಪಡೀಲ್ ಮೊದಲಾದ ತುಳುನಾಡಿ ದಿಗ್ಗಜ ಕಲಾವಿದರು ಪಾತ್ರ ನಿರ್ವಹಿಸಿದ್ದಾರೆ ಎಂದು ಚಿತ್ರದ ನಾಯಕ ನಟ ಎಲ್ಟನ್ ಜೆಫ್ ತಿಳಿಸಿದರು.
ಗೋಷ್ಟಿಯಲ್ಲಿ ನಾಯಕ ನಟಿ ಅದ್ವಿತಿ ಶೆಟ್ಟಿ, ಅನೂಪ್ ಸಾಗರ್, ಶೈಲಕ್ಶ್ರೀ ಮುಲ್ಕಿ ದೀಪಕ್ ಸಿಂಗ್ ಉಪಸ್ಥಿತರಿದ್ದರು.