ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಕಳ್ಳತನ

ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಕಳ್ಳತನ

ಬೆಳ್ತಂಗಡಿ: ಕನ್ಯಾಡಿ ಗ್ರಾಮದ ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದ ಎದುರಿನ ಬೀಗವನ್ನು ಮುರಿದು ಕಳ್ಳರು ದೇವರ ೫ ಕಾಣಿಕೆ ಡಬ್ಬಿಗಳನ್ನು ಕಳವುಗೈದಿದ್ದಾರೆ.

ಎ.22 ರಂದು ನಸುಕಿನ ವೇಳೆ ಸುಮಾರು 2 ಗಂಟೆಗೆ ದೇವಸ್ಥಾನದ ಎದುರಿನ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು, 2 ದೊಡ್ಡ ಕಾಣಿಕೆ ಡಬ್ಬಿ ಹಾಗೂ 3 ಸಣ್ಣ ಕಾಣಿಕೆ ಡಬ್ಬಿಯನ್ನು ಕಳವುಗೈದು ಪರಾರಿಯಾಗಿದ್ದಾರೆ.

ಕಳವು ಗೈದಿರುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಭಕ್ತರು ಕಾಣಿಕೆ ಹಾಕಿದ ಸುಮಾರು 30 ಸಾವಿರಕ್ಕೂ ಅಧಿಕ ಹಣ ಇತ್ತೆಂದು ಅಂದಾಜಿಸಲಾಗಿದೆ.

ನಿಡಿಗಲ್ ಶ್ರೀ ಲೋಕನಥೇಶ್ವರ ದೇವಸ್ಥಾನದ ಸಿರಿ ಜಾತ್ರೋತ್ಸವ ಇತ್ತೀಚಿಗೆ ಆದ್ದೂರಿಯಾಗಿ ಜರುಗಿತ್ತು.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ ಸಿ.ಕೆ., ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್., ಬೆಳ್ತಂಗಡಿ ಪ್ರಭಾರ ಸಬ್ ಇನ್ಸ್‌ಪೆಕ್ಟರ್ ಸಿಖಂದರ್ ಪಾಷ ಹಾಗೂ ಸಿಬ್ಬಂದಿ, ಮಂಗಳೂರು ಶ್ವಾನ ದಳ ತಂಡ, ಬೆರಳಚ್ಚು ತಜ್ಞರ ತಂಡ, ಎಫ್‌ಎಸ್‌ಎಲ್ ವಿಭಾಗದ ಸೋಕೊ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article