ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆ

ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆ


ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡುಬಿದಿರೆ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಮೂಡುಬಿದಿರೆ ತಾಲೂಕಿನ ಪದಾಧಿಕಾರಿಗಳ ಸಭೆಯು ಬುಧವಾರ ಸಮಾಜ ಮಂದಿರದಲ್ಲಿ ನಡೆಯಿತು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ದೀಪ ಬೆಳಗಿಸಿ ಕಾಯ೯ಕ್ರಮವನ್ನು ಉದ್ಘಾಟಿಸಿದರು. ಸುಭಾಶ್ಚಂದ್ರ ಚೌಟ ಅವರು ಅಧ್ಯಕ್ಷತೆ ವಹಿಸಿದ್ದರು.                   

ಸದ್ರಿ ವರ್ಷದ ಕ್ರಿಯಾಯೋಜನೆ ಕುರಿತು ಚರ್ಚಿಸಲಾಯಿತು  ಹಾಗೂ ಪದಾಧಿಕಾರಿಗಳ ಬದಲಾವಣೆ ನಡೆಸಿ ನೂತನ ಅಧ್ಯಕ್ಷರಾಗಿ ವಾಸುದೇವ ನಾಯಕ್ ಅವರನ್ನು ಆಯ್ಕೆ ಮಾಡಲಾಯಿತು.

ದ.ಕ. ಜಿಲ್ಲಾ ನಿರ್ದೇಶಕ ಡಿ. ದಿನೇಶ್ ಅವರು ಮಾಹಿತಿ ಮಾರ್ಗದರ್ಶನ ನೀಡಿದರು.  ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಲೂಕಿನ ಯೋಜನಾಧಿಕಾರಿ  ಧನಂಜಯ ಬಿ. ಅವರು ಸ್ವಾಗತಿಸಿ ಗತಸಭೆಯ ವರದಿ ಮಂಡಿಸಿದರು. 

ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ವೇದಿಕೆ ಯೋಜನಾಧಿಕಾರಿ  ಗಣೇಶ್ ಅವರು ಭಾಗವಹಿಸಿ ಯಶಸ್ವಿ ಕಾರ್ಯಕ್ರಮ ಸಂಯೋಜನೆ ಕುರಿತು ತಿಳಿಸಿದರು. 

ತಾಲೂಕಿನ ಎಲ್ಲಾ ಜನಜಾಗೃತಿ ಸದಸ್ಯರು ಹಾಗೂ ಮೇಲ್ವಿಚಾರಕರ ಶ್ರೇಣಿ ಸಿಬ್ಬಂದಿಗಳು, ಜನಜಾಗೃತಿ ವೇದಿಕೆ ಮೇಲ್ವಿಚಾರಕರು ಭಾಗವಹಿಸಿದರು.

ಮೇಲ್ವಿಚಾರಕಿ ಯಶೋಧ ಕಾಯ೯ಕ್ರಮ ನಿರೂಪಿಸಿದರು.    ಮೇಲ್ವಿಚಾರಕ ಚಂದ್ರಹಾಸ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article