SSLC ಪರೀಕ್ಷಾ ಫಲಿತಾಂಶ: ಬೀದಿಬದಿ ವ್ಯಾಪಾರಿಯ ಪುತ್ರಿಯ ಅಮೋಘ ಸಾಧನೆ 96.48% ಅಂಕ ಪಡೆದ ರಕ್ಷಾ
Thursday, April 23, 2026
ಮಂಗಳೂರು: SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ದ.ಕ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದೆ ಈ ಮಧ್ಯೆ ಮಂಗಳೂರಿನ ಬೀದಿಬದಿ ವ್ಯಾಪಾಯೊಬ್ಬರ ಪುತ್ರಿ ಕೆ. ರಕ್ಷಾ GN, ಅವರು ಶೇಕಡಾ 96.48 ಅಂಕ ಪಡೆದು ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ನಗರದ ಕಂಕನಾಡಿ ಗ್ರಾಮದ ಕಪಿತಾನಿಯೋ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಆಗಿರುವ ರಕ್ಷಾ ಅವರು ಹಿಂದಿ ಮತ್ತು ಕನ್ನಡ ವಿಷಯದಲ್ಲಿ 100 ಅಂಕ ಗಳಿಸಿ ಗಮನಾರ್ಹ ಸಾಧನೆ ಮಾಡಿದ ಅವರು ನಗರದ ಪಂಪ್ ವೆಲ್ ಬಳಿ ಬೀದಿಬದಿಯಲ್ಲಿ ಆಹಾರ ಮಾರಾಟಗಾರರಾಗಿರುವ ನಾಗೇಶ್ ಮತ್ತು ಗಾಯತ್ರಿ ಅವರ ಸುಪುತ್ರಿ ಆಗಿರುವ ರಕ್ಷಾ ಅವರ ಸಾಧನೆಗೆ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (CITU) ಅಭಿನಂದನೆಗಳನ್ನು ಸಲ್ಲಿಸಿದೆ.