ಮಹಿಳಾ ಮೀಸಲಾತಿಗೆ ಹಿನ್ನಡೆ, ಕಾಂಗ್ರೆಸ್ ಮತ್ತು ವಿಪಕ್ಷಗಳ ಮಹಿಳಾ ವಿರೋಧಿ ಮನಸ್ಥಿತಿ ಬಯಲು: ಸತೀಶ್ ಕುಂಪಲ
Saturday, April 18, 2026
ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಹಳ ಮಹತ್ವಾಕಾಂಕ್ಷೆಯ ಮತ್ತು ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಲೋಕಸಭೆಯಲ್ಲಿ ಹಿನ್ನಡೆಯಾಗಿರುವುದು, ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳ ಮಹಿಳಾ ವಿರೋಧಿ ದೋರಣೆಯಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದ್ದಾರೆ.
ಮಹಿಳಾ ಮೀಸಲಾತಿ ಯಿಂದ ರಾಜಕೀಯದಲ್ಲಿ ಸ್ತ್ರೀಯರಿಗೆ ಮರೀಚಿಕೆಯಾಗಿದ್ದ ಸೂಕ್ತ ಪ್ರಾತಿನಿಧ್ಯ ಮತ್ತು ಕ್ಷೇತ್ರ ಮರು ವಿಂಗಡಣೆ ಯಿಂದ ಅಭಿವೃದ್ಧಿಗೆ ಅನೂಕೂಲವಾದ ವಾತಾವರಣ ವನ್ನು ವಿಪಕ್ಷಗಳು ತಮ್ಮ ಸ್ವಹಿತಕ್ಕಾಗಿ ವಿಫಲ ಗೊಳಿಸಿರುವುದನ್ನು ದೇಶದ ಜನತೆ ಸಹಿಸುವುದಿಲ್ಲ.
ಮಹಿಳೆಯರಿಗೆ ದೊರೆಯ ಬಹುದಾಗಿದ್ದ ನ್ಯಾಯವನ್ನು ಕಸಿದ ಕಾಂಗ್ರೆಸ್ ಗೆ ಮಹಿಳೆಯರೇ ಭವಿಷ್ಯದಲ್ಲಿ ಪಾಠ ಕಲಿಸಲಿದ್ದಾರೆ ಎಂದು ಕುಂಪಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.