ಸಿಬಿಎಸ್‌ಇ ಪರೀಕ್ಷೆಯಲ್ಲಿ ಮೂಡುಬಿದಿರೆಯ ರೋಟರಿ ಕೇಂದ್ರೀಯ ಶಾಲೆ ಉತ್ತಮ ಸಾಧನೆ

ಸಿಬಿಎಸ್‌ಇ ಪರೀಕ್ಷೆಯಲ್ಲಿ ಮೂಡುಬಿದಿರೆಯ ರೋಟರಿ ಕೇಂದ್ರೀಯ ಶಾಲೆ ಉತ್ತಮ ಸಾಧನೆ


ಮೂಡುಬಿದಿರೆ: 205-26 ನೇ ಸಾಲಿನ ಸಿಬಿಎಸ್ ಇ ಪರೀಕ್ಷೆಯ ಹತ್ತನೇ ತರಗತಿಯಲ್ಲಿ ರೋಟರಿ ಕೇಂದ್ರೀಯ ಶಾಲೆಯು ಶೇಕಡಾ 100 ಫಲಿತಾಂಶ ದಾಖಲಿಸಿದೆ. ಒಟ್ಟು 35 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಶ್ರೀಯ ಟಿ. ಪಿ ಜೈನ್ ಶೇಕಡ 94.6% ಪಡೆಯುವುದರ ಮೂಲಕ ಸಾಧನೆ ಮೆರೆದಿದ್ದಾರೆ.

ಶ್ರೀಯಾ ಎಸ್ ಶೇ 92.8% ಜೊತೆಗೆ ಸಂಸ್ಕೃತದಲ್ಲಿ 100 ಅಂಕ ಪಡೆದಿದ್ದು , ಅನ್ವಿತಾ ಪ್ರದೀಪ್ (92.80%), ದಿವೀಕ್ಷ್ ಡಿ ರೈ(89.60%), ಸೀಮಾ ಬಿ( 89.40%), ಕೈರಾ ಲೇಖ್ ರಾಜ್ ಶೆಟ್ಟಿ ( 88.40%), ಚಾಡಲವಾಡ ರುಷಿಧರ್ ರೆಡ್ಡಿ ( 88%), ಈಶಾನ್ವಿ ಶೆಟ್ಟಿ (87.30%), ಫಾತಿಮಾ ಝುಹೈರಾ (85.80%), ಮೊಹಮ್ಮದ್ ಶಿಹಾಬ್ ಶಫಿ (84.80%) ಅಂಕ ಪಡೆದಿದ್ದಾರೆ. 20 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು ಉಳಿದ ಮಕ್ಕಳು ಉತ್ತಮ ಶ್ರೇಣಿ ಯಲ್ಲಿ ಉತ್ತೀರ್ಣರಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article