ಕೆಪಿಟಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಕೆಪಿಟಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಮಂಗಳೂರು: ದೇಶದ ಪ್ರಥಮ ಸ್ವಾಯತ್ತ ಸರಕಾರಿ ಪಾಲಿಟೆಕ್ನಿಕ್ ಆಗಿರುವ ಕರ್ನಾಟಕ ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರಿನ ಕರ್ನಾಟಕ  (ಸರ್ಕಾರಿ) ಪಾಲಿಟೆಕ್ನಿಕ್ (ಕೆಪಿಟಿ) ನಲ್ಲಿ  ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ವರ್ಷದಿಂದ ವಿದ್ಯಾರ್ಥಿಗಳ ಪ್ರವೇಶಕ್ಕೆ ‘ಕೆಪಿಟಿ-ಸಿಎಟಿ’ ಪರೀಕ್ಷಾ ಕ್ರಮ ಆರಂಭಿಸಲಾಗುತ್ತಿದೆ.

ಎಐಸಿಟಿಇ ನವದೆಹಲಿಯಿಂದ ಮಾನ್ಯತೆ ಪಡೆದಿರುವ ನಮ್ಮ ಸಂಸ್ಥೆಯಲ್ಲಿ ಸ್ವಾಯತ್ತೆತೆಯಿಂದಾಗಿ ಕಾಲೇಜು 2-3 ವರ್ಷಗಳಿಗೊಮ್ಮೆ ತನ್ನ ಪಠ್ಯಕ್ರಮವನ್ನು ಕೈಗಾರಿಕಾ ಅಗತ್ಯಗಳಿಗೆ ತಕ್ಕಂತೆ ಪರಿಷ್ಕರಿಸಿಕೊಳ್ಳಬಹುದಾಗಿದೆ. ಕೈಗಾರಿಕಾ ಸಹಭಾಗಿತ್ವದ ಕೋರ್ಸ್ ವಿನ್ಯಾಸ, ತ್ವರಿತ ಮತ್ತು ಪಾರದರ್ಶಕ ಮೌಲ್ಯಮಾಪನ, ಗುಣಮಟ್ಟದ ಬೋಧಕರ ವರ್ಗ, ಸಂಶೋಧನೆ, ಪ್ರಾಜೆಕ್ಟ್ ಮತ್ತು ನಾವೀನ್ಯತೆಗೆ ಅವಕಾಶ, ಹೊಸ ತಂತ್ರಜ್ಞಾನ ಕೋರ್ಸುಗಳ ಪರಿಚಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮನ್ನಣೆ ಕೆಪಿಟಿ ವಿಶೇಷತೆಯಾಗಿದೆ ಎಂದು ಕೆಪಿಟಿ ಪ್ರಾಂಶುಪಾಲ ಹರೀಶ್ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಾವುದೇ ವಿದ್ಯಾರ್ಥಿ 10ನೇ ತರಗತಿ ಉತ್ತೀರ್ಣನಾದ ನಂತರ ನಮ್ಮ 3 ವರ್ಷಗಳ ಡಿಪ್ಲೋಮಾ ಎಂಜಿನಿಯರಿಂಗ್ ಕೋರ್ಸ್ಗೆ ನೇರವಾಗಿ ಪ್ರವೇಶ ಪಡೆಯಬಹುದು.ಅಟೋಮೊಬೈಲ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್, ಮೆಕ್ಯಾನಿಕ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್, ಕೆಮಿಕಲ್ ಎಂಜಿನಿಯರಿಂಗ್, ಪಾಲಿಮರ್ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಲಭ್ಯವಿರುವ ಡಿಪ್ಲೋಮಾ ಕೋರ್ಸ್ಗಳಾಗಿವೆ. ಅರ್ಜಿ ನಮೂನೆಯನ್ನು ಮತ್ತು ಮಾಹಿತಿ ಪುಸ್ತಕವನ್ನು ಕಾಲೇಜಿನಿಂದ ಖುದ್ದಾಗಿ ಪಡೆದು, ಅರ್ಜಿ ಭರ್ತಿ ಮಾಡಿ, ದಾಖಲೆಗಳೊಂದಿಗೆ, ಸ್ವಯಂ ದೃಢೀಕರಿಸಿದ ನಕಲು ಪ್ರತಿಗಳೊಂದಿಗೆ ದಾಖಲೆ ಪರಿಶೀಲನೆ ಮತ್ತು ಆನ್ಲೈನ್ ಅರ್ಜಿ ಸಲ್ಲಿಕೆ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ, ಸ್ವೀಕೃತಿ ಪಡೆಯಬೇಕು. ಇದುವೇ ಕೆಪಿಟಿ-ಸಿಎಟಿ ಪ್ರವೇಶ ಪತ್ರ ಆಗಿರುತ್ತದೆ. 

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕೆಪಿಟಿ-ಸಿಎಟಿ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕು. ಎಸ್‌ಎಸ್‌ಎಲ್ಸಿಯ ಶೇ.75 ಅಂಕ ಹಾಗೂ ಕೆಪಿಟಿ-ಸಿಎಟಿಯ ಶೇ.25 ಅಂಕಗಳ ಆಧಾರದಲ್ಲಿ ಮೆರಿಟ್ ತಯಾರಿಸಿ ಪ್ರಕಟಿಸಲಾಗುತ್ತದೆ. ಅಂತಿಮ ಮೆರಿಟ್ ಮತ್ತು ರೋಸ್ಟರ್ ಅನ್ವಯ ಆಫ್ಲೈನ್ ಇಂಟರಾಕ್ಟಿವ್ ಕೌನ್ಸಿಲಿಂಗ್ ಮೂಲಕ ಸೀಟು ಹಂಚಿಕೆ ನಡೆಯಲಿದೆ. ಏ.27ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಮೇ 11 ಅರ್ಜಿ ಸಲ್ಲಿಕೆ ಕೊನೆ ದಿನಾಂಕವಾಗಿದೆ. 

ಕೆಪಿಟಿ-ಸಿಎಟಿ ಮೊದಲ ಹಂತದ ಪರೀಕ್ಷೆ ಮೇ 6ರಂದು ಬೆಳಗ್ಗೆ 10ರಿಂದ, ಎರಡನೇ ಹಂತದ ಪರೀಕ್ಷೆ ಮೇ 13ರಂದು ನಡೆಯಲಿದೆ. ಮೇ 18ರಂದು ಸಂಜೆ 5ಕ್ಕೆ ಡ್ರಾಫ್ಟ್ ಮೆರಿಟ್ ಪಟ್ಟಿ, ಮೇ 20ರಂದು ಸಂಜೆ 5ಕ್ಕೆ ಅಂತಿಮ ಮೆರಿಟ್ ಪಟ್ಟಿ ಪ್ರಕಟಿಸಲಾಗುತ್ತದೆ. 

ಮೇ 21ರಂದು ಬೆಳಗ್ಗೆ 8ಕ್ಕೆ ವಿಶೇಷ ಮೀಸಲಾತಿ ಕೌನ್ಸಿಲಿಂಗ್, ಸಂಜೆ ಪಾಳಿ ಪ್ರವೇಶದ ಕೌನ್ಸಿಲಿಂಗ್, ಮೇ 22ರಿಂದ 25 ಪ್ರಥಮ ಸುತ್ತಿನ ಕೌನ್ಸಿಲಿಂಗ್, ಮೇ 26ರಿಂದ 27 ದ್ವಿತೀಯ ಸುತ್ತಿನ ಕೌನ್ಸಿಲಿಂಗ್, ಮೇ 29ರಿಂದ 30 ಅಂತಿಮ ಸುತ್ತಿನ ಕೌನ್ಸಿಲಗ್ಗ್ ನಡೆಯಲಿದೆ ಎಂದು ಅವರು ವಿವರಿಸಿದರು.

ಸಂಸ್ಥೆಯ ಪ್ರಮುಖರಾದ ರವೀಂದ್ರ ಕೇನಿ, ನಾರಾಯಣ ಸ್ವಾಮಿ, ಪಿ.ಡಿ.ತಳವಾರ್, ವಿನೋದಾ ಕುಮಾರಿ, ಡಾ.ಸತೀಶ್ ಕೆ.ಎನ್., ಹರಿಶ್ ಸಿ.ಪಿ. ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article