ಕಾರ್ ರೇಸಿಂಗ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಸ್ಪೀಕರ್
Tuesday, April 28, 2026
ಮಂಗಳೂರು: ಇಲ್ಲಿನ ಹೊರವಲಯದ ಬಂಗ್ರ ಕೂಳೂರು ಗೋಲ್ಡ್ ಫಿಂಚ್ ಸಿಟಿ ಬಳಿ ರವಿವಾರ ನಡೆದ ಡರ್ಟ್ ಟ್ರಾಕ್ ಕಾರ್ ರೇಸಿಂಗ್ ಸ್ಪರ್ಧೆಯಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಭಾಗವಹಿಸಿದ್ದಲ್ಲದೆ ನಾಲ್ಕನೇ ಸ್ಥಾನ ಪಡೆದು ಗಮನ ಸೆಳೆದರು.
ಫೋಕ್ಸ್ ವ್ಯಾಗನ್ ಪೋಲೊ ಜಿಟಿ ಕಾರನ್ನು ಚಲಾಯಿಸಿದ ಖಾದರ್‌ಅವರು, ಕೆಲ ಕ್ಷಣಗಳ ಅಂತರದಲ್ಲಿ ಹಿಂದೆ ಬಿದ್ದ ಕಾರಣ ಮೂರನೇ ಸ್ಥಾನಿಯಾಗುವುದನ್ನು ತಪ್ಪಿಸಿಕೊಂಡರು.
ಕಾಲೇಜು ದಿನಗಳಿಂದಲೇ ಮೋಟಾರ್ ಕ್ರೀಡೆಗಳತ್ತ ಅಪಾರ ಆಸಕ್ತಿ ಹೊಂದಿದ್ದ ಅವರು, ದ್ವಿಚಕ್ರ ಮತ್ತು ಕಾರು ರೇಸಿಂಗ್ ಸ್ಪರ್ಧೆಗಳಲ್ಲಿ ಹಲವು ಬಾರಿ ಭಾಗವಹಿಸಿದ ಅನುಭವ ಹೊಂದಿದ್ದಾರೆ.