ಕುಪ್ಮ ಕರ್ನಾಟಕ ಬೇಡಿಕೆಗೆ ಸ್ಪಂಧಿಸಿದ ಶಿಕ್ಷಣ ಇಲಾಖೆ
ಈ ಸಂದರ್ಭದಲ್ಲಿ ಪೋಷಕರ ಸಹಮತದೊಂದಿಗೆ ವಿಶೇಷ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸುವ ಕುರಿತು ಚರ್ಚೆ ನಡೆದಿದ್ದು, ರಶ್ಮಿ ಮಹೇಶ್ ಅವರು ಸಕಾರಾತ್ಮಕ ಭರವಸೆ ನೀಡಿದರು. ಜೊತೆಗೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಭರತ್ ಸರ್ ಅವರಿಗೆ ಈ ಸಂಬಂಧ ಸೂಕ್ತ ಸುತ್ತೋಲೆ ಹೊರಡಿಸಲು ಸಭೆಯಲ್ಲಿಯೇ ಸೂಚಿಸಿದರು. ಮರುದಿನವೇ ಸುತ್ತೊಲೆ ಹೊರಡಿಸಲಾಗಿದೆ.
ರಾಜ್ಯದ ಖಾಸಗಿ ಪಿ.ಯು. ಕಾಲೇಜುಗಳ ಗಂಭೀರ ಸಮಸ್ಯೆಗಳನ್ನು ಮನಗಂಡು, ನಮ್ಮ ಮನವಿಗೆ ಸ್ಪಂದಿಸಿ ತುರ್ತಾಗಿ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ಏರ್ಪಡಿಸಿ ಸಮಸ್ಯೆಗಳನ್ನು ಸಮಗ್ರವಾಗಿ ಮಂಡಿಸಲು ಅವಕಾಶ ಕಲ್ಪಿಸಿದಲ್ಲದೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಶೇಷ ತರಗತಿಗಳನ್ನು ನಡೆಸಲು ಅನುಮತಿ ನೀಡುವ ದಿಕ್ಕಿನಲ್ಲಿ ಕ್ರಮಕೈಗೊಂಡು, ಖಾಸಗಿ ಕಾಲೇಜುಗಳಿಗೆ ಆತಂಕಕಾರಿಯಾದ ಡಿಜಿ ಲಾಕರ್ ಮೂಲಕ ಟಿ.ಸಿ. ವಿತರಣಾ ನಿರ್ಧಾರವನ್ನು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮನವರಿಕೆ ಮಾಡಿಕೊಟ್ಟರು.
ತುಮಕೂರು ಕೋಲಾರ ಶಿಕ್ಷಕರ ಕ್ಷೇತ್ರದ ವಿಧಾನಸಭಾ ಸದಸ್ಯ ಡಿ.ಟಿ. ಶ್ರೀನಿವಾಸ್, ಬೆಂಗಳೂರು ಉತ್ತರ ಜಿಲ್ಲೆಯ ಕುಪ್ಮಾ ಕಾರ್ಯದರ್ಶಿ ಡಾ. ದೇವರಾಜ್ ಬಿ.ಕೆ., ಬೆಂಗಳೂರು ದಕ್ಷಿಣ ಜಿಲ್ಲೆಯ ಕುಪ್ಮಾ ಅಧ್ಯಕ್ಷ ಡಾ. ಜಯರಾಮ್ ಶೆಟ್ಟಿ, ಬೆಂಗಳೂರು ಉತ್ತರ ಜಿಲ್ಲೆಯ ಸಹಕಾರ್ಯದರ್ಶಿ ವೆಂಕಟೇಶ್ ಬಿ.ಎಂ. ಹಾಗೂ ಮತ್ತೊಬ್ಬ ಸಹಕಾರ್ಯದರ್ಶಿ ಮಧುಕುಮಾರ್ ಟ್ಯಾಪ್ ರೂಟ್ ಗ್ರೂಪ್ ಆಫ್ ಪಿಯು ಕಾಲೇಜಿನ ನಿರ್ದೇಶಕ ಪ್ರೊ. ಶ್ರೀಧರ್, ದಕ್ಷ ಅಕಾಡೆಮಿ ಪಿಯು ಕಾಲೇಜಿನ ನಿರ್ದೇಶಕ ಅಕ್ಷಯ್ ಹಾಗೂ ವಿದ್ಯಾಸಂಕಲ್ಪ ಪಿಯು ಕಾಲೇಜಿನ ಅಧ್ಯಕ್ಷ ಮನೋಹರ್ ಉಪಸ್ಥಿತರಿದ್ದರು.
