ಡಿಜಿಟಲ್ ಆರೋಗ್ಯ ನೀತಿ: ಸಭೆ
Monday, April 13, 2026
ಮಂಗಳೂರು: ಡಿಜಿಟಲ್ ಯುಗದ ಅಬ್ಬರದಲ್ಲಿ ಮಕ್ಕಳ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮ ಗಳನ್ನು ತಡೆಗಟ್ಟಲು ರಾಜ್ಯ ಸರಕಾರವು ಡಿಜಿಟಲ್ ಆರೋಗ್ಯ ಕರಡು ನೀತಿಯನ್ನು ರೂಪಿಸುತ್ತಿದೆ. ಈ ಕುರಿತು ಒಆರ್‌ಇಎಸ್ಪಿ ಮತ್ತು ಪಡಿ ಸಂಸ್ಥೆಯ ಸಹಯೋಗದಲ್ಲಿ ಸಾರ್ವಜನಿಕ ಸಮಾಲೋಚನಾ ಸಭೆಯು ನಗರದಲ್ಲಿ ಇತೀಚಿಗೆ ನಡೆಯಿತು.
ಪಡಿ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ರೆನ್ನಿ ಡಿಸೋಜ ಕರಡು ನೀತಿಯ ಪ್ರಮುಖ ಅಂಶಗಳನ್ನು ವಿವರಿಸಿ ದರು ಒಆರ್‌ಇಎಸ್ಪಿ ಪ್ರತಿನಿಧಿ ಡಾ.ಕೀರ್ತಿ ನಕ್ರಾಯಿ ಮಾತನಾಡಿ ಇತ್ತೀಚಿನ ಸಂಶೋಧನೆಗಳ ಪ್ರಕಾರ 4 ತಿಂಗಳ ಶಿಶುವಿನಿಂದ 18 ವರ್ಷದ ಹದಿಹರೆಯದ ಮಕ್ಕಳಿಗೆ ಮೊಬೈಲ್ ಬಳಕೆಯಿಂದಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಆದ್ದರಿಂದ ವಯಸ್ಸಿಗೆ ಅನುಗುಣವಾಗಿ ಪ್ರತ್ಯೇಕ ಪರಿಹಾರ ಮಾರ್ಗಗಳನ್ನು ನೀತಿಯಲ್ಲಿ ಸೇರಿಸಬೇಕು ಎಂದು ಸಲಹೆ ನೀಡಿದರು.
ಲಿಡಿಯಾ ಲೋಬೊ, ಕಮಲಾಗೌಡ, ಪ್ರೇಮಿ ಫೆರ್ನಾಂಡಿಸ್, ವನಿತಾ, ಆಶಾಲತಾ ಬೇಕಲ್, ಡಾ. ಸ್ಮಿತಾ, ವಿವೇಕ್, ವಿಜಯ ಪಡಿ, ಸುಪ್ರೀತ್, ಮಲ್ಲಿಕಾ, ನವ್ಯಾಶ್ರೀ ಮತ್ತಿತರರು ಉಪಸ್ಥಿತರಿದ್ದರು.