ಸೈದಾಂತಿಕ ಸ್ಪಷ್ಟತೆಯೊಂದಿಗೆ ಪ್ಯಾಶಿಸಂ ಅನ್ನು ಎದುರಿಸಬೇಕು: ಕಾಮ್ರೇಡ್ ಕ್ಲಿಪ್ಟನ್ ಡಿ ರೊಜಾರಿಯೋ
ಸಮ್ಮೇಳನದ ಆರಂಭದಲ್ಲಿ ಧ್ವಜಾರೋಹಣವನ್ನು ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ನೆರವೇರಿಸಿದರು.
ಪ್ರತಿನಿಧಿ ಅಧಿವೇಶನದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಪ್ರತಿನಿಧಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪಕ್ಷದ ಚಟುವಟಿಕೆಗಳ ಬಗ್ಗೆ ವರದಿ ಮಂಡಿಸಿದರು.
ಪಕ್ಷದ ರಾಜ್ಯ ಸಮಿತಿ ಸದಸ್ಯ ಮೋಹನ್ ಕೆ.ಇ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಮುಖಂಡರುಗಳಾದ ಮಾರ್ಟಿನ್ ಕಕ್ಕಿಂಜೆ, ತುಳಸೀದಾಸ್ ಆರ್., ಅನ್ಸಾರ್ ಬಜಾಲ್, ಸುಧಾ ರಾವ್ ಬೆಳ್ತಂಗಡಿ, ಮಹಮ್ಮದ್ ಲುಕ್ಮಾನ್ ವರದಿಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದರು.
ಪಕ್ಷಕ್ಕೆ ಬೀದಿ ಬದಿ ವ್ಯಾಪಾರಸ್ಥರ ಸಂಘಟನೆಯ ನೌಶಾದ್ ಮತ್ತು ಅಬ್ದುಲ್ ಖಾಲೀದ್ ವಲಸೆ ಕಾರ್ಮಿಕರ ಸಂಘದ ಮುಖಂಡರಾದ ಮಹಮ್ಮದ್ ಅಶ್ರಾದ್ ಆಸೀಫ್ ಹಾಗೂ ವಿದ್ಯಾರ್ಥಿ ಮುಖಂಡ ಪ್ರಜ್ವಲ್ ಸೇರ್ಪಡೆಗೊಂಡರು.
ಸಮ್ಮೇಳನದಲ್ಲಿ ಜಿಲ್ಲೆಯಲ್ಲಿ ಸರಕಾರಿ ಅಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಂಡಿರುವುದರ ವಿರುದ್ಧ ಹಾಗೂ ಆರೋಗ್ಯ ರಂಗದ ಖಾಸಗೀಕರಣದ ವಿರುದ್ಧ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
ಪಕ್ಷದ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಕಾರ್ಯದರ್ಶಿಯಾಗಿ ರಾಮಣ್ಣ ವಿಟ್ಲ ಪುನರಾಯ್ಕೆಯಾದರು.
ಜಿಲ್ಲಾ ಸಮಿತಿ ಸದಸ್ಯರುಗಳಾಗಿ ಮೋಹನ್ ಕೆ.ಇ., ಮಾರ್ಟಿನ್ ಕಕ್ಕಿಂಜೆ, ತುಳಸೀದಾಸ್ ಆರ್., ಅನ್ಸಾರ್ ಬಜಾಲ್, ಮಹಮ್ಮದ್ ಲುಕ್ಮಾನ್, ಮಹಮ್ಮದ್ ಮುಂಝಿರ್, ಅಶ್ರಫ್ ಕೊಯಿಲ, ಸುಹೈಲ್, ಮಹಮ್ಮದ್ ಆಸೀಫ್, ಮುಸ್ತಾಕ್ ಆಲಿ, ಸಜೇಶ್ ವಿಟ್ಲ, ಸರಸ್ವತಿ ಕಡೇಶ್ವಾಲ್ಯ, ನೌಶಾದ್, ಝಾಬಿದ್, ಸುಧಾ ರಾವ್ ಬೆಳ್ತಂಗಡಿ, ಕುಸುಮಾವತಿ ಬೆಳ್ತಂಗಡಿ, ಸುಧಾ ರಾವ್ ಉಜಿರೆ, ಸಂಜೀವ ಬೆಳ್ತಂಗಡಿ, ದೀಕ್ಷಿತಾ ಬಜಾಲ್, ಪ್ರಜ್ವಲ್ ಆಯ್ಕೆಯಾದರು.
ಮೋಹನ್ ಕೆ.ಇ. ವಂದಿಸಿದರು. ಅನ್ಸಾರ್ ಬಜಾಲ್ ಧ್ವಜ ಆರೋಹಣ ಮಾಡಿದರು.

