ಬಿಜೆಪಿ ಜಿಲ್ಲಾ ಎಸ್.ಟಿ. ಮೋರ್ಚಾ ನೂತನ ಅಧ್ಯಕ್ಷರ ನೇಮಕ

ಬಿಜೆಪಿ ಜಿಲ್ಲಾ ಎಸ್.ಟಿ. ಮೋರ್ಚಾ ನೂತನ ಅಧ್ಯಕ್ಷರ ನೇಮಕ


ಮಂಗಳೂರು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಎಸ್.ಟಿ. ಮೋರ್ಚಾದ ನೂತನ ಜಿಲ್ಲಾಧ್ಯಕ್ಷರನ್ನಾಗಿ ಮಾಜಿ ಉಪಮೇಯರ್ ಸುಮಿತ್ರಾ ಕರಿಯರನ್ನು ನೇಮಕ ಮಾಡಿದ್ದಾರೆ.

ಸುಮಿತ್ರಾ ಕರಿಯ ಅವರು ಮಾಜಿ ಉಪಮೇಯರ್ ಆಗಿ, ಸತತವಾಗಿ ಮೂರು ಬಾರಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. 

ಕ್ರೀಯಾಶೀಲ, ಸಮಾಜಸೇವೆ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ದಿಗಾಗಿ ಸದಾ ಕಾರ್ಯೋನ್ಮುಖರಾಗಿ ತೊಡಗಿಸಿಕೊಂಡಿರುತ್ತಾರೆ. ಇವರ ಸೇವೆಯನ್ನು ಗುರುತಿಸಿ ಭಾರತೀಯ ಜನತಾ ಪಾರ್ಟಿಯು ಎಸ್.ಟಿ. ಮೋರ್ಚಾದ ಜಿಲ್ಲಾಧ್ಯಕ್ಷರನ್ನಾಗಿ ಪ್ರಥಮ ಬಾರಿಗೆ ಎಸ್.ಟಿ. ಮಹಿಳೆಯೊಬ್ಬರನ್ನು ಜಿಲ್ಲಾಧ್ಯಕ್ಷರಾಗಿ ಗುರುತಿಸಿರುವುದು ಇವರ ಸಮಾಜಸೇವೆಗೆ ಹಿಡಿದ ಕೈಗನ್ನಡಿಯಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article