ಸಂತ ರವಿದಾಸರ ಜಯಂತಿ ಪ್ರಯುಕ್ತ ಒಂದು ದಿನದ ವಿಚಾರ ಸಂಕಿರಣ

ಸಂತ ರವಿದಾಸರ ಜಯಂತಿ ಪ್ರಯುಕ್ತ ಒಂದು ದಿನದ ವಿಚಾರ ಸಂಕಿರಣ

ಮಂಗಳೂರು: ಸಂತ ರವಿದಾಸರ 650ನೇ ಜಯಂತಿ ಪ್ರಯುಕ್ತ ‘ಸಾಮಾಜಿಕ ಸಮಾನತೆಯ ಹರಿಕಾರ’ ಎಂಬ ವಿಷಯದಡಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏಪ್ರಿಲ್ 18ರಂದು ಬೆಳಗ್ಗೆ 9 ಗಂಟೆಗೆ ನಗರದ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಯೋಜಿಸಲಾಗಿದೆ.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ.) ದಕ್ಷಿಣ ಕನ್ನಡ ಜಿಲ್ಲೆ, ವಿಶ್ವವಿದ್ಯಾಲಯ ಕಾಲೇಜು, ಮಂಗಳೂರು ಹಿಂದಿ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಹಿಂದೀ ಅಧ್ಯಾಪಕರ ಸಂಘದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಹೊಸದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎಸ್. ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್. ವಹಿಸಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ. ಮಹದೇಶ ಕೆ.ಸಿ., ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜ್ಯ ಅಧ್ಯಕ್ಷ ಡಾ. ಗುರುನಾಥ್ ಬಡಿಗೇರ, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ.ಕೆ., ಪುಣೆಯ ಚಂದಮಾಲ್ ತಾರಾಚಂದ್ ಬೋರ ಕಾಲೇಜಿನ ಹಿಂದಿ ವಿಭಾಗದ ಪ್ರಾಧ್ಯಾಪಕ ಪ್ರೊ. ಈಶ್ವರ್ ಪವಾರ್, ಕೆ.ಎಲ್.ಇ. ಸೊಸೈಟಿ ಜಬಿನ್ ಕಾಲೇಜು ಹುಬ್ಬಳ್ಳಿ ಇಲ್ಲಿನ ವಿಶ್ರಾಂತ ಪ್ರಾಂಶುಪಾಲ ಡಾ. ಲಿಂಗರಾಜ ಡಿ. ಹೊರಕೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ನಾನಾ ವಿಚಾರಗೋಷ್ಠಿಗಳು ನಡೆಯಲಿದ್ದು, ಮೊದಲ ಅವಧಿಯಲ್ಲಿ ‘ಭಾರತೀಯತೆಗೆ ಸಂತ ರವಿದಾಸರ ಕೊಡುಗೆ’ ವಿಷಯದ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹ ಬೌಧಿಕ್ ಪ್ರಮುಖ ಸುಧೀರ್ ವಿಚಾರ ಮಂಡಿಸಲಿದ್ದಾರೆ. ಎರಡನೇ ಅವಧಿಯಲ್ಲಿ ‘ಸಾಮಾಜಿಕ ಸಮಾನತೆಯ ಹರಿಕಾರ ಸಂತ ರವಿದಾಸ’ ವಿಷಯದ ಕುರಿತು ಪುಣೆಯ ಚಂದಮಾಲ್ ತಾರಾಚಂದ್ ಬೋರ ಕಾಲೇಜಿನ ಹಿಂದಿ ವಿಭಾಗದ ಪ್ರಾಧ್ಯಾಪಕ ಪ್ರೊ. ಈಶ್ವರ್ ಪವಾರ್ ಹಾಗೂ ಮೂರನೇ ಅವಧಿಯಲ್ಲಿ ‘ಸಮಾಜ ಸುಧಾರಣೆಯಲ್ಲಿ ಸಂತ ರವಿದಾಸರ ಪಾತ್ರ’ ವಿಷಯದ ಕುರಿತು ತಿರುಪತಿ ವಿಶ್ವವಿದ್ಯಾನಿಲಯದ ಪ್ರೊ. ರಾಮ ಪ್ರಕಾಶ್ ವಿಚಾರ ಮಂಡಿಸಲಿದ್ದಾರೆ. ನಾಲ್ಕನೇ ಅವಧಿಯಲ್ಲಿ ‘ಮಾನವತಾವಾದಿಯಾಗಿ ಸಂತ ರವಿದಾಸರು’ ವಿಷಯದ ಕುರಿತು ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರೊ. ತಾರು ಪವಾರ್ ಮಾತನಾಡಲಿದ್ದಾರೆ. 

ಸಂಜೆ 3.45 ರಿಂದ 4.30ರವರೆಗೆ ಸಮಾರೋಪ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ಹಿಂದಿ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಮುರಳೀಧರ ವಿ. ನಾಯಕ್ ಸಮಾರೋಪ ಭಾಷಣ ಮಾಡಲಿದ್ದು, ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಸಂದೀಪ್ ಬೂದಿಹಾಳ, ಎಂ.ಎಸ್.ಐ. ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ರೋಹಿಣಿ ಕುಮಾರ ಹಳ್ಳಿ ಹಾಗೂ ಉದ್ಯಮಿ ಅಭಿಷೇಕ್ ಕುಬ್ಸದ ಕುಂದರ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article