ಏ.19 ರಂದು ಉಡುಪಿ-ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವ
Thursday, April 16, 2026
ಉಡುಪಿ: ಇಲ್ಲಿನ ಸಂತೆಕಟ್ಟೆಯ ಹಾ.ಹೆ. 66 ರ ಅಂಬಾಗಿಲು ಸಮೀಪದ ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ಏ.19 ರಂದು ಅಕ್ಷಯ ತೃತೀಯ ದಿನದಂದು ದೇವಳದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಜರುಗಲಿರುವುದು.
ಅಂದು ಬೆಳಗ್ಗೆ ಪ್ರಾರ್ಥನೆ, ಪುಣ್ಯಾಹ, ಕಲಾ ಸಾನಿಧ್ಯಯುಕ್ತವಾಗಿ *ಚಂಡಿಕಾಯಾಗ*, ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ವಿಶೇಷ ಹೂವಿನ ಅಲಂಕಾರ ಪೂಜೆ, 12:30ಕ್ಕೆ ಮಹಾ ಮಂಗಳಾರತಿ, ತೀರ್ಥ- ಪ್ರಸಾದ ವಿತರಣೆ, ಬಳಿಕ ಸಾರ್ವಜನಿಕ ಮಹಾ "ಅನ್ನ ಸಂತರ್ಪಣೆ "ಕಾರ್ಯಕ್ರಮ ನಡೆಯಲಿರುವುದು.
ಸಂಜೆ 6 ಕ್ಕೆ "ದುರ್ಗಾ ನಮಸ್ಕಾರ ಪೂಜೆ" ,ಮಹಾಪೂಜೆ. ರಾತ್ರಿ 8 ಕ್ಕೆ ಶ್ರೀದೇವಿ ದರ್ಶನ, ಪ್ರಸಾದ ವಿತರಣೆ ನಡೆಯಲಿದೆ ಎಂದು ಗಾಂವಸ್ಕರ್ ಕುಟುಂಬಸ್ಥರ ಪ್ರಕಟಣೆಯಲ್ಲಿ ತಿಳಿಸಿದೆ.