ಕಾವೂರಿನಲ್ಲಿ ರಥಬೀದಿ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ

ಕಾವೂರಿನಲ್ಲಿ ರಥಬೀದಿ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ


ಮಂಗಳೂರು: ಇಲ್ಲಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರ ಕಾವೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕಾವೂರಿನ ಹಿರಿಯ ಸಮಾಜ ಸೇವಕಿ ಪೆಲ್ಸಿರೇಗೊ ಅವರು ಸಮುದಾಯ ಸೇವೆ, ಸಾಮಾಜಿಕ ಹೊಣೆಗಾರಿಕೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರದ ಮಹತ್ವವನ್ನು ವಿವರಿಸಿದರು. 

ಸ್ಥಳೀಯ ಶಾಸಕ ಡಾ. ವೈ ಭರತ್ ಶೆಟ್ಟಿ ಶಿಬಿರಕ್ಕೆ ಶುಭ ಹಾರೈಸಿದರು.

ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶಿಬಿರದ ಮಹತ್ವ, ಶಿಸ್ತಿನ ಅಗತ್ಯತೆ ಹಾಗೂ ಸಮಾಜಸೇವೆಯ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸದ ಬಗ್ಗೆ ತಿಳಿಸಿದರು.

ದೈಹಿಕ ಶಿಕ್ಷಣ ನಿರ್ದೇಶಕಿ ಶುಭಾ ಕೆ.ಎಚ್., ಎನ್‌ಎಸ್‌ಎಸ್ ಧ್ವಜಾರೋಹಣ ನೆರವೇರಿಸಿ ಸ್ವಯಂಸೇವಕರಿಗೆ ಪ್ರತಿಜ್ಞಾ ವಚನ ಬೋಧಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಸೀತಮ್ಮ ಜೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಿಂಚನಾ ಕಾರ್ಯಕ್ರಮ ನಿರ್ವಹಿಸಿದರು.

ಸಮಾರೋಪ ಸಮಾರಂಭವು ಪ್ರಭಾರ ಪ್ರಾಂಶುಪಾಲ ಪ್ರೊ. ದುಗ್ಗಪ್ಪ ಕಜೆಕಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಿಬಿರಾಧಿಕಾರಿ ಡಾ. ಮೋಹನ್ ದಾಸ್ ಸ್ವಾಗತಿಸಿ, ಸಹ ಶಿಬಿರಾಧಿಕಾರಿ ಧೀರಜ್ ಕುಮಾರ್ ಶಿಬಿರ ವರದಿ ಮಂಡಿಸಿದರು. ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಶಿಬಿರಾಧಿಕಾರಿ ಡಾ. ಲೋಕೇಶ್‌ನಾಥ್ ಬಿ. ನಡೆಸಿಕೊಟ್ಟರು.

ಸಮಾಜ ಸೇವಕಿ ಪೆಲ್ಸಿರೇಗೊ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಚಲವಾದಿ, ಹಿರಿಯ ವಿದ್ಯಾರ್ಥಿ ಕುಮಾರ್ ವಿಟ್ಲ, ಕೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ಮಹಾಂತೇಶ್ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಅಪರ್ಣ ಆಳ್ವ, ಶಿಬಿರಾಧಿಕಾರಿ ಶೋಭಾಮಣಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿಬಿರಾರ್ಥಿ ಸ್ವಯಂಸೇವಕರು ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿನಿ ಹರ್ಣಿತಾ ಅವರು ನಿರೂಪಿಸಿದರು.

ಈ ಶಿಬಿರದಲ್ಲಿ ಶ್ರಮದಾನದ ಮೂಲಕ ಶಿಬಿರಾರ್ಥಿಗಳು ಶಾಲೆಯ ಮೈದಾನ ಸಮತಟ್ಟು ಮಾಡುವುದರ ಜೊತೆಗೆ ಆವರಣದ ಸ್ವಚ್ಛತೆ, ಕೈತೋಟ ಸುಧಾರಣೆ, ಪರಿಸರ ಸಂರಕ್ಷಣೆ ಜಾಗೃತಿ, ಆರೋಗ್ಯ ಸರ್ವೆ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಿದರು. ಪ್ರತಿದಿನ ಅಪರಾಹ್ನ ವಿಷಯತಜ್ಞರಿಂದ ಪ್ರಚಲಿತ ವಿಷಯಗಳ ಬಗ್ಗೆ ಉಪನ್ಯಾಸ ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

ಈ ಶಿಬಿರವನ್ನು ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ. ಲೋಕೇಶ್‌ನಾಥ್ ಬಿ., ಡಾ. ಮೋಹನ್ ದಾಸ್ ಮತ್ತು ಶೋಭಾಮಣಿ ಜಂಟಿಯಾಗಿ ಸಂಘಟಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article