ಜೆಇಇ ಮೈನ್ಸ್‌ನಲ್ಲಿ ಎಕ್ಸಲೆಂಟ್ ಅತ್ಯುತ್ತಮ ಸಾಧನೆ

ಜೆಇಇ ಮೈನ್ಸ್‌ನಲ್ಲಿ ಎಕ್ಸಲೆಂಟ್ ಅತ್ಯುತ್ತಮ ಸಾಧನೆ


ಮೂಡುಬಿದಿರೆ: ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಾದ ಜೆಇಇ ಮೈನ್ಸ್‌ನಲ್ಲಿ ಎಕ್ಸಲೆಂಟ್ ಮೂಡಬಿದಿರೆ ತನ್ನ ಅತ್ಯುತ್ತಮ ಶೈಕ್ಷಣಿಕ ಪರಂಪರೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ವರ್ಷದ ಫಲಿತಾಂಶದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಯೊಂದಿಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಈ ಬಾರಿ ಪರೀಕ್ಷೆಗೆ ಹಾಜರಾದ ಒಟ್ಟು 176ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು 97 ಪರ್ಸೆಂಟೈಲ್‌ಗಿಂತ ಹೆಚ್ಚು ಸಾಧನೆ ಮಾಡಿ ಜೆಇಇ ಅಡ್ವಾನ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು 95 ಪರ್ಸೆಂಟೈಲ್, 76 ವಿದ್ಯಾರ್ಥಿಗಳು 90 ಪರ್ಸೆಂಟೈಲ್ ಗಳ ಸಾಧನೆಯನ್ನು ಮಾಡಿದ್ದಾರೆ

ಸಂಸ್ಥೆಯ ಪ್ರಜ್ವಲ್ ಎಸ್ (99.1967053), ತನ್ಮಯ್ ಎ ಕೋಟಿ (98.8128729), ರಾಹುಲ್ ಪಿ ಗೌಡ (98.6123529), ತನುಷ್ ಪಾಟೀಲ್ (98.3173191), ನಿಶ್ಚಲ್ ಪಿ ಗೌಡ (98.2818077), ಭರತ್ ಆನಂದ್ (97.993185), ಪವನ್ ಕುಮಾರ್ ಆರ್ ತುಂಗಲ್ (97.9238417), ಈಶ್ವರ್ ಪುಂಡಲಿಕಪ್ಪ ಕೊಪ್ಪಲ್ (97.9251222), ಸಾತ್ವಿಕ್ ದತ್ತ ಬೋಯ (97.7979821), ನಾಗ ದರ್ಶನ್ ಬಿ.ಇ (97.7631655) ರಚನಾ ಎಸ್‌ಎಂ ( 99.6231047) ಉತ್ತಮ ಸಾಧನೆ ಮಾಡಿದ್ದಾರೆ.

ನಾಗದರ್ಶನ್ ಎಚ್.ಇ ಭೌತಶಾಸ್ತ್ರದಲ್ಲಿ 100 ಪರ್ಸೆಂಟೈಲ್ ಗಳೊಂದಿಗೆ ವಿಶೇಷ ಸಾಧನೆ ಮಾಡಿದ್ದಾರೆ.

ಜನರಲ್ ಮೆರಿಟ್ ಕ್ಯಾಟಗರಿಯಲ್ಲಿ ಸಂಸ್ಥೆಯ 44 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಈ ಸಾಧನೆಯ ಕುರಿತು ಸಂಸ್ಥೆಯ ಅಧ್ಯಕ್ಷರಾದ   ಯುವರಾಜ್ ಜೈನ್ ಹಾಗೂ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಸಂತೋಷ ವ್ಯಕ್ತಪಡಿಸಿದ್ದು, ಸಂಸ್ಥೆಯ ವಿಶೇಷ ತರಬೇತಿ ಕಾರ್ಯಕ್ರಮಗಳು, ತಜ್ಞರ ಮಾರ್ಗದರ್ಶನ, ಆನ್‌ಲೈನ್ ಹಾಗೂ ಆಫ್‌ಲೈನ್ ತರಗತಿಗಳ ಸಮನ್ವಯ, ಡೌಟ್ ಕ್ಲಿಯರಿಂಗ್ ಸೆಷನ್‌ಗಳು ಮತ್ತು ವೈಯಕ್ತಿಕ ಕೌನ್ಸಿಲಿಂಗ್ ವ್ಯವಸ್ಥೆಯು ವಿದ್ಯಾರ್ಥಿಗಳ ಸಾಧನೆಯನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article