ಪ್ರೇರಣಾ ಶಾಲೆಯ ಶತಮಾನೋತ್ಸವ ಕಾಯ೯ಕ್ರಮ ಸಮಾರೋಪ

ಪ್ರೇರಣಾ ಶಾಲೆಯ ಶತಮಾನೋತ್ಸವ ಕಾಯ೯ಕ್ರಮ ಸಮಾರೋಪ


ಮೂಡುಬಿದಿರೆ: ಸೇವಾಂಜಲಿ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ವಿದ್ಯಾಭಾರತಿ ಸಂಯೋಜಿತ ಪ್ರೇರಣಾ ಅನುದಾನಿಕ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮದ ಸಮಾರೋಪ ಸಮಾರಂಭವು ಭಾನುವಾರ ಸಂಜೆ ನಡೆಯಿತು. 


ಸಂಸ್ಥೆಯ ಅಧ್ಯಕ್ಷ ರಾಜೇಶ್ ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮಕ್ಕಳಿಗೆ  ಸಂಸ್ಕಾರ ಬೇಕು. ಮಕ್ಕಳಲ್ಲಿರುವ ಋಣಾತ್ಮಕ ಅಂಶಗಳನ್ನು ತೆಗೆದು ಭಗವಂತ ಇದ್ದಾನೆ ಎಂಬ ಶಕ್ತಿ ನಾವು ಕೊಟ್ಟಾಗ ಅದು ಸಂಸ್ಕಾರವಾಗಿ ಮಾಪಾ೯ಡಾಗುತ್ತದೆ ಎಂದು ಹೇಳಿದರು. 

ಅದಾನಿ ಫೌಂಡೇಶನ್ ನ ಸಹ ಉಪಾಧ್ಯಕ್ಷ ಕಿಶೋರ್ ಆಳ್ವ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮಕ್ಕಳು ಶಿಕ್ಷಣ ಪಡೆದು ಬೇರೆ ಬೇರೆ ಕ್ಷೇತ್ರಗಳಿಗೆ ಹೋಗಬಹುದು. ಹೆತ್ತವರನ್ನು, ಶಿಕ್ಷಕರನ್ನು ಮರೆಯದಿರಿ ಅವರನ್ನು ಗೌರವಿಸಿ ಎಂದು ಸಲಹೆ ನೀಡಿದರು. 

ವಿದ್ಯಾ ಭಾರತಿಯ ಸಂಘಟನಾ ಕಾಯ೯ದಶಿ೯ ಉಮೇಶ್ ಕುಮಾರ್ ಶುಭಾಂಶನೆಗೈದರು. 

7ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ವಿದ್ಯಾಥಿ೯ಗಳನ್ನು ಅಭಿನಂದಿಸಲಾಯಿತು. 

ವಿದ್ಯಾಥಿ೯ಗಳಿಗೆ ಮತ್ತು ಹೆತ್ತವರಿಗೆ ಏಪ೯ಡಿಸಿದ್ದ ವಿವಿಧ ಸ್ಪಧೆ೯ಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಸನ್ಮಾನ : ಅದಾನಿ ಫೌಂಡೇಶನ್ ನ ಸಹ ಉಪಾಧ್ಯಕ್ಷ ಕಿಶೋರ್ ಆಳ್ವ,ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ಕನಾ೯ಟಕ ಹೈಕೋಟ್೯ ಅಡ್ವೋಕೇಟ್ ಸಂದೇಶ್ ಶೆಟ್ಟಿ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಸಂಚಾಲಕ ಶಾಂತಾರಾಮ ಕುಡ್ವ  ಉಪಸ್ಥಿತರಿದ್ದರು. 

ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ವಾಷಿ೯ಕ ವರದಿ ವಾಚಿಸಿದರು. .

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article