ಮಾದಕ ವಸ್ತು ಮಾರಾಟಕ್ಕೆ ಯತ್ನ ಪ್ರಕರಣ: ಇಬ್ಬರ ಬಂಧನ
Monday, April 20, 2026
ಮಂಗಳೂರು: ನಗರ ಹೊರವಲಯದ ಪಚ್ಚನಾಡಿ ಗ್ರಾಮದ ಮಂಗಳೂರು ಹಿಲ್ಸ್ ರೋಡ್ ಬಳಿ ಮಾದಕ ವಸ್ತುವನ್ನು ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ಶನಿವಾರ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಶಕ್ತಿನಗರದ ಶಾಮ್ ಶಂಕರ್ (38) ಮತ್ತು ಪ್ರವೀಣ್ ಜಾಯ್ಸನ್ ಡಿಸೋಜ (43) ಎಂದು ಗುರುತಿಸ ಲಾಗಿದೆ. ಆರೋಪಿಗಳಿಂದ 1,42,000 ರೂ. ಮೌಲ್ಯದ 14.58 ಗ್ರಾಂ ಎಂಡಿಎಂ, 2,300 ರೂ.ನಗದು, 12,000 ರೂ.ಮೌಲ್ಯದ ಎರಡು ಮೊಬೈಲ್ ಪೋನ್, ಕೃತ್ಯಕ್ಕೆ ಬಳಸಿದ 30 ಸಾವಿರ ರೂ. ಮೌಲ್ಯದ ಸ್ಕೂಟರ್ ಹಾಗೂ 2 ಲಕ್ಷ ರೂ. ಮೌಲ್ಯದ ಕಾರು ವಶಪಡಿಸಲಾಗಿದೆ.