‘ಕೊರಗ್ಲಾ ತನಿಯಾ’ ಮತ್ತು ‘ಕನ’ ತುಳು ಸಿನಿಮಾಗಳಿಗೆ ಕದ್ರಿ ದೇವಸ್ಥಾನದಲ್ಲಿ ಮುಹೂರ್ತ

‘ಕೊರಗ್ಲಾ ತನಿಯಾ’ ಮತ್ತು ‘ಕನ’ ತುಳು ಸಿನಿಮಾಗಳಿಗೆ ಕದ್ರಿ ದೇವಸ್ಥಾನದಲ್ಲಿ ಮುಹೂರ್ತ


ಮಂಗಳೂರು: ಪ್ರಾರ್ಥನಾ ಕ್ರಿಯೇಷನ್ಸ್ ಲಾಂಛನದಲ್ಲಿ ಡಾ. ಆರ್. ಧನರಾಜ್ ನಿರ್ಮಾಣದೊಂದಿಗೆ ನಿರ್ದೇಶಿಸುತ್ತಿರುವ ‘ಕೊರಗ್ಲಾ ತನಿಯಾ’ ಮತ್ತು ‘ಕನ’ ತುಳು ಚಿತ್ರಗಳ ಮುಹೂರ್ತ ಸಮಾರಂಭ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ನೆರವೇರಿತು. 

ಕೊರಗ್ಲಾ ತನಿಯ ಸಿನಿಮಾಕ್ಕೆ ಶಾಸಕ ಸಿ.ಬಿ. ಸುರೇಶ್ ಕ್ಯಾಮರಾ ಚಾಲನೆಗೈದರು. ಕದ್ರಿ ದೇವಸ್ಥಾನದ ಆಡಳಿತ ನಿರ್ದೇಶಕ ಎ.ಜೆ. ಶೆಟ್ಟಿ ಕ್ಲ್ಯಾಪ್ ಮಾಡಿದರು. ಕನ ಸಿನಿಮಾಕ್ಕೆ ವಿಜಯಕುಮಾರ್ ಕೊಡಿಯಾಲ್ ಬೈಲ್ ಕ್ಯಾಮರಾ ಚಾಲನೆ ನೀಡಿದರು. ಸುಮನ್ ತಲ್ವಾರ್ ಆರಂಭ ಫಲಕ ತೋರಿಸಿದರು.

ಬಳಿಕ ದೇವಸ್ಥಾನದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಹುಭಾಷಾ ನಟ ಸುಮನ್ ತಲ್ವಾರ್ ಮಾತನಾಡಿ, ಭಾಷೆ, ಸಂಪ್ರದಾಯ ಮತ್ತು ಸಂಸ್ಕೃತಿ ಜಗತ್ತಿಗೆ ಪರಿಚಯಿಸುವ ಸಿನಿಮಾಗಳಿಗೆ ಸರ್ಕಾರವು ಸಬ್ಸಿಡಿ ಮತ್ತು ತೆರಿಗೆ ವಿನಾಯಿತಿ ನೀಡಬೇಕು. ಆಗ ಮಾತ್ರ ಹೆಚ್ಚಿನ ನಿರ್ಮಾಪಕರು ಇಂತಹ ಕಥೆಗಳನ್ನು ತೆರೆಯ ಮೇಲೆ ತರಲು ಮುಂದೆ ಬರುತ್ತಾರೆ ಎಂದು ಹೇಳಿದರು.

ಕಾಂತಾರ ಸಿನಿಮಾ ಬಂದ ಮೇಲೆ ಅನೇಕರು ಇಂತಹ ಪ್ರಯತ್ನಕ್ಕೆ ಕೈಹಾಕುತ್ತಿದ್ದಾರೆ. ಕಾಂತಾರದ ಬಳಿಕ ಇಲ್ಲಿ ದೈವದ ಶಕ್ತಿ ಬೆಳಕಿಗೆ ಬಂದಿದೆ. ನಿರ್ದೇಶಕ ಆರ್. ಧನರಾಜ್ ಅವರು 20 ವರ್ಷಗಳ ಹಿಂದೆಯೇ ಲಾಭ-ನಷ್ಟದ ಲೆಕ್ಕಾಚಾರವಿಲ್ಲದೆ ‘ಕೋಟಿ ಚೆನ್ನಯ’ ಚಿತ್ರ ಮಾಡುವ ಮೂಲಕ ತುಳು ಚಿತ್ರರಂಗಕ್ಕೆ ದೊಡ್ಡ ಹೆಸರು ತಂದುಕೊಟ್ಟಿದ್ದರು. ಈಗ ಅವರು ‘ಕೊರಗ್ಲಾ ತನಿಯಾ’, ಕನ ಚಿತ್ರದ ಮೂಲಕ ಮತ್ತೆ ಅಂತಹದ್ದೇ ಸಾಹಸಕ್ಕೆ ಮುಂದಾಗಿದ್ದಾರೆ. ಈ ಚಿತ್ರದ ಕಥೆ ತುಂಬಾ ಚೆನ್ನಾಗಿದ್ದು, ನಾನೂ ಕೂಡ ಇದರಲ್ಲಿ ಒಂದು ಪಾತ್ರ ಮಾಡುತ್ತಿದ್ದೇನೆ’ ದಕ್ಷಿನ ಕನ್ನಡ ಜಿಲ್ಲೆ ದೈವಗಳ ಶ್ರದ್ದಾ ಕೇಂದ್ರ ಎಂದು ಅವರು ತಿಳಿಸಿದರು.

ಪ್ರಾರ್ಥನಾ ಕ್ರಿಯೇಷನ್ ಲಾಂಛನದಲ್ಲಿ ಐದಾರು ಭಾಷೆಗಳಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಸಿನಿಮಾ ನಿರ್ಮಾಣ ಆಗುತ್ತಿರುವುದು ಹೆಮ್ಮೆಯ ವಿಚಾರ. ತುಳುನಾಡಿನವರಿಗೆ ಇಲ್ಲಿನ ಶಕ್ತಿ ಸರಿಯಾಗಿ ಗೊತ್ತಿಲ್ಲ. ಇಲ್ಲಿನವರು ಏಳೆಂಟು ಭಾಷೆಗಳನ್ನು ಬಲ್ಲವರು, ಅಂತಹ ಸಮೃದ್ಧ ಸಂಸ್ಕೃತಿಯನ್ನು ಉಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ಚಿತ್ರಗಳಿಗೆ ಕೊರಗಜ್ಜ ಮತ್ತು ಕದ್ರಿ ಮಂಜುನಾಥನ ಆಶೀರ್ವಾದ ಸದಾ ಇರಲಿ ಎಂದು ಸುಮನ್ ತಲ್ವಾರ್ ಹಾರೈಸಿದರು.

ಜೆಡಿಎಸ್ ಮುಖಂಡ ಹಾಗೂ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಅವರು ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಿರ್ದೇಶಕ ಆರ್. ಧನರಾಜ್ ಅವರು ಈಗಾಗಲೇ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನೀಡಿರುವ ಪ್ರತಿಭಾವಂತರು. ಈ ‘ಕೊರಗ್ಲಾ ತನಿಯಾ’ ಚಿತ್ರವೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲಿ. ಹಾಡುಗಳು ಮತ್ತು ಕಥೆಯ ಮೂಲಕ ಸಮಾಜವನ್ನು ತಿದ್ದುವ ಕೆಲಸ ಈ ಚಿತ್ರದಿಂದ ಆಗಲಿ ಎಂದು ಶುಭ ಹಾರೈಸಿದರು.

ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ತುಳು ಚಿತ್ರರಂಗ ಈಗ ಸಂಕಷ್ಟದಲ್ಲಿದೆ. ಧನರಾಜ್ ಸಿನಿಮಾ ನಿರ್ಮಿಸಿ ಎರಡೂ ಸಿನಿಮಾಗಳು ಮೈಲುಗಲ್ಲು ಸ್ಥಾಪಿಸಲಿ ಎಂದರು. 

ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಡಾ. ಆರ್. ಧನರಾಜ್ ಮಾತನಾಡಿ, ಈ ಚಿತ್ರಗಳು ಆರು ಭಾಷೆಗಳಲ್ಲಿ ಮೂಡಿಬರಲಿದ್ದು, ಉತ್ತಮ ಕಥೆ ಮತ್ತು ಸಂದೇಶವನ್ನು ಹೊಂದಿವೆ. ತುಳುನಾಡಿನ ಸಂಪ್ರದಾಯವನ್ನು ವಿಶ್ವದಾದ್ಯಂತ ಪಸರಿಸುವ ಈ ಪ್ರಯತ್ನಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಕೋರಿದರು.

ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಜಾನಪದ ಪರಿಷತ್‌ನ ಅಧ್ಯಕ್ಷ ಪಮ್ಮಿ ಕೊಡಿಯಾಲ್‌ಬೈಲ್, ವಕೀಲ ಮೋಹನ್ ದಾಸ್ ರೈ, ಸುಧಾಕರ್ ಮೊಯಿಲಿ, ಹಿರಿಯ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಧನರಾಜ್ ಅವರ ತಾಯಿ ಕೆ. ಪುಷ್ಪಾ, ಅರ್ಚನ ಶೆಟ್ಟಿ, ನಾಗೇಶ್ ಶೆಟ್ಟಿ ಮುಂಬೈ, ಅನಿಲ್, ರಾಮಣ್ಣ, ಸಂಜೀವ ಮಾಸ್ಟರ್, ಪುರುಷೋತ್ತಮ್, ರಾಜೇಶ್ ಕೊಚ್ಚಿನ್, ಜೆಪಿ, ಗಂಗಾಧರ ಕಿರೋಡಿಯನ್, ಯುವನಟ ಸಾಜನ್ ಶೆಟ್ಟಿ, ಯುವನಟಿ ಹಿಮಾನಿ, ನಾಗೇಶ್ ಮತ್ತಿತರರಿದ್ದರು. ಆಂಕರ್ ಚೇತನ್ ಶೆಟ್ಟ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article