ಸಮಾಜದ ಶಾಂತಿಗಾಗಿ ಕಾಂಗ್ರೆಸ್‌ನ ನೀಚ ಮನಸ್ಥಿತಿಯನ್ನು ಹೆಮ್ಮೆಟ್ಟಿಸಬೇಕಾಗಿದೆ: ಆರ್.ಎಸ್.ಎಸ್. ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಡಾ. ಭರತ್ ಶೆಟ್ಟಿ ಕಿಡಿ
Saturday, April 11, 2026
ಮಂಗಳೂರು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿಷಕಾರಿ ಹಾವುಗಳಂತೆ. ಹಾವು ಬಂದರೆ, ನಮಾಜ್ ಅನ್ನು ಅರ್ಧಕ್ಕೆ ನಿಲ್ಲಿಸಿ ಅದನ್ನು ಕೊಲ್ಲಬೇಕು ಎಂದು ಹೇಳಿ ಪ್ರಚೋದನಾ ಹೇಳಿಕೆ ನೀಡಿದ್ದು ಖಂಡನೀಯ’ ಎಂದು ಬಿಜೆಪಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.
ರಾಜಕೀಯ ಲಾಭಕ್ಕಾಗಿ ಪದೇ ಪದೆ ಮಲ್ಲಿಕಾರ್ಜುನ ಖರ್ಗೆಯವರು ಹಿಂದೂ ವಿರೋಧಿ ಹಾಗೂ ಆರ್.ಎಸ್.ಎಸ್. ವಿರೋಧಿ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಇಂತಹ ಮನಸ್ಥಿತಿಯುಳ್ಳವರ ಕೈಯಲ್ಲಿ ಜನ ಅಧಿಕಾರ ನೀಡಿದರೆ ಸಮಾಜದಲ್ಲಿ ದಂಗೆ ಉಂಟಾಗುವುದರಲ್ಲಿ ಸಂಶಯವಿಲ್ಲ. ಸಮಾಜದ ಶಾಂತಿಗಾಗಿ ಕಾಂಗ್ರೆಸ್‌ನ ಇಂತಹ ನೀಚ ಮನಸ್ಥಿತಿಯನ್ನು ಹೆಮ್ಮೆಟ್ಟಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.