ಥ್ಯಾಂಕ್ಯೂ ಸೋ.. ಮಚ್ "ಬೆದ್ರ ಉತ್ಸವ"ಗ್ ಲೆತ್ತಿನೈಕ್: ರಕ್ಷಿತಾ ಶೆಟ್ಟಿ
Sunday, April 12, 2026
ಮೂಡುಬಿದಿರೆ: ಹಾಯ್ ಎಂಚ ಉಲ್ಲರ್ ಎಂದು ಮಾತಿಗೆ ಆರಂಭಿಸಿದ ಬಿಗ್ ಬಾಸ್ ರನ್ನರ್ ಆಪ್ ಪ್ರಶಸ್ತಿ ವಿಜೇತೆ ರಕ್ಷಿತಾ ಶೆಟ್ಟಿ ಯಾನ್ ಬನ್ನಗ ಚೂರು ಲೇಟಾಂಡ್ ಎಂಕ್ ಗೊತ್ತುಂಡು ನಿಕುಲು ಎನನ್ ಕಾತೊಂದುಲ್ಲರ್ಂದ್ ನಿಕ್ಲೆನ ಪ್ರೀತಿಯೇ ಎನ್ನ ಶಕ್ತಿ " ಥ್ಯಾಂಕ್ಯೂ ಸೋ.. ಮಚ್ ನಿಕುಲು ಎನನ್ ಬೆದ್ರ ಉತ್ಸವಗ್ ಲೆತ್ತಿನೈಕ್ ಎಂದರು.
ಅವರು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಬೆದ್ರ ಉತ್ಸವ ಕಾಯ೯ಕ್ರಮದಲ್ಲಿ ಶನಿವಾರ ರಾತ್ರಿ ಪಾಲ್ಗೊಂಡು ಮಾತನಾಡಿದರು.
ಬಿಗ್ ಬಾಸ್ ಕಾಯ೯ಕ್ರಮವನ್ನು ಮಿಸ್ ಮಾಡ್ಕೊಳ್ತಿದ್ದೀರಾ ಎಂದು ಪ್ರಶ್ನಿಸಿದ ಅವರು ನಿಮ್ಮ ಆಶೀವಾ೯ದದಿಂದ ನಾನು ಇಲ್ಲಿ ನಿಲ್ಲಲು ಸಾಧ್ಯವಾಗಿದೆ ಎಂದ ಅವರು "ಸೇವಂತಿಯೇ ಸೇವಂತಿಯೇ" ಎಂಬ ಹಾಡನ್ನು ಹಾಡಿದಲ್ಲದೆ "ಮಸ್ತ್ ಮಲೈಕಾ..." ಎಂಬ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸಭಿಕರನ್ನು ರಂಜಿಸಿದರು.
ಈ ಸಂದಭ೯ದಲ್ಲಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.