ಎಂಡಿಎಮ್‌ಎ ಸಹಿತ ಮೂವರ ಬಂಧನ
Monday, April 27, 2026
ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 50 ಗ್ರಾಂ ಎಂಡಿಎಮ್‌ಎ ಮಾದಕ ವಸ್ತು ಸಹಿತ ಮೂವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಾಸರಗೋಡು ಜಿಲ್ಲೆಯ ಅಲಂಪಾಡಿ ನಿವಾಸಿ ಸಿ.ಎ. ಮುಹಮ್ಮದ್ ಸಹಲ್, ಎರ್ನಾಕುಲಂ ಮೂಲದ ಅರುಣ್ ಕುಮಾರ್ ಹಾಗೂ ವಡಗರ ನಿವಾಸಿ ಎಂ.ಪಿ. ಅನೂಷ್ ಎಂದು ಗುರುತಿಸಲಾಗಿದೆ.
ತಮಗೆ ಲಭಿಸಿದ ಖಚಿತ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಂಜೇಶ್ವರ ಪಾವೂರು ಸಮೀಪ ಸ್ವಿಫ್ಟ್ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದ ವೇಳೆ ಎಂಡಿಎಮ್‌ಎ ಪತ್ತೆಯಾಗಿದೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.