ಮೂಡುಬಿದಿರೆ ಎಕ್ಸಲೆಂಟ್  ಶಾಲೆಯ ವಿದ್ಯಾಥಿ೯ಗಳ ಸಾಧನೆ: ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಅಗ್ರ 10 ರ್‍ಯಾಂಕ್‌ಗಳಲ್ಲಿ 9 ವಿದ್ಯಾರ್ಥಿಗಳು

ಮೂಡುಬಿದಿರೆ ಎಕ್ಸಲೆಂಟ್ ಶಾಲೆಯ ವಿದ್ಯಾಥಿ೯ಗಳ ಸಾಧನೆ: ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಅಗ್ರ 10 ರ್‍ಯಾಂಕ್‌ಗಳಲ್ಲಿ 9 ವಿದ್ಯಾರ್ಥಿಗಳು


ಮೂಡುಬಿದಿರೆ: ಎಕ್ಸಲೆಂಟ್ ಮೂಡುಬಿದಿರೆ ಶಾಲೆ 2025-26ರ ಎಸ್‌ಎಸ್‌ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅಗ್ರ 10 ರ್‍ಯಾಂಕ್‌ಗಳಲ್ಲಿ 9 ವಿದ್ಯಾರ್ಥಿಗಳು ರ್‍ಯಾಂಕ್‌ಗಳನ್ನು ಪಡೆದು ಸತತ 6ನೇ ಬಾರಿ ಶೇಕಡಾ 100 ಫಲಿತಾಂಶವನ್ನು ಪಡೆದು ತನ್ನ ಶೈಕ್ಷಣಿಕ ಉತ್ಕೃಷ್ಟತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.

ಸಚಿನ್ ಡಿ ನಾಯ್ಕ್ 622 (4ನೇ ರ್‍ಯಾಂಕ್), ನಕ್ಷತ್ರ ವಿ – 620 (6 ನೇ ರ್‍ಯಾಂಕ್), ಗಗನ್ ಪಾಟೀಲ್- 618( 8 ನೇ ರ್‍ಯಾಂಕ್), ದೇವಾನಂದ ಹನುಮಂತಗೌಡ ಬಿರಾದಾರ್- 618(8 ನೇ ರ್‍ಯಾಂಕ್), ಅನ್‌ಮೋಲ್‌ಆರ್ ಪಾಟೀಲ್- 618( 8 ನೇ ರ್‍ಯಾಂಕ್), ಪ್ರತೀಕ್ ಸಂಗ್ರೀಷಿ -617 (9 ನೇ ರ್‍ಯಾಂಕ್), ಸಿ ಹರಿಪ್ರೀತ್ ವಿ ಪೈ – 616( 10 ನೇ ರ್‍ಯಾಂಕ್), ಆರ್ಯನ್‌ಕುಮಾರ್ ಹಳ್ಳಿ – 616(10 ನೇ ರ್‍ಯಾಂಕ್), ಆಕಾಂಕ್ಷ್ ಎಮ್ ಜೈನ್- 616 ( 10 ನೇ ರ್‍ಯಾಂಕ್) ಗಳನ್ನು ಗಳಿಸುವುದರ ಮೂಲಕ ಸಂಸ್ಥೆಯ ಸಂಸ್ಕಾರಭರಿತ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ.

ಈ ಸಾಧನೆಯಲ್ಲಿ 23 ವಿದ್ಯಾರ್ಥಿಗಳು 610ಕ್ಕಿಂತ ಹೆಚ್ಚು, 45 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಮಿಂಚಿದ್ದಾರೆ. 53 ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು, 112 ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಹಾಗೂ 151 ವಿದ್ಯಾರ್ಥಿಗಳು 85% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯನ್ನು ಪಡೆದು ಸಾಧನೆಯನ್ನು ಮೆರೆದಿದ್ದಾರೆ.

ವಿಷಯವಾರು ಸಾಧನೆಯಲ್ಲಿಯೂ ವಿದ್ಯಾರ್ಥಿಗಳು ಮೈಲಿಗಲ್ಲು ಸ್ಥಾಪಿಸಿದ್ದು, ಸಂಸ್ಕೃತದಲ್ಲಿ 45 ವಿದ್ಯಾರ್ಥಿಗಳು ಕನ್ನಡದಲ್ಲಿ 44, ಹಿಂದಿಯಲ್ಲಿ 31, ಗಣಿತದಲ್ಲಿ 11, ಸಮಾಜ ವಿಜ್ಞಾನದಲ್ಲಿ 8 ಮತ್ತು ವಿಜ್ಞಾನ ವಿಷಯದಲ್ಲಿ 2 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳು ಮತ್ತು ಪ್ರಥಮ ಭಾಷೆ ಇಂಗ್ಲೀಷ್‌ನಲ್ಲಿ 13 ವಿದ್ಯಾರ್ಥಿಗಳು 125 ಅಂಕಗಳಿಗೆ 124 ಅಂಕಗಳನ್ನು ಪಡೆದು ಮಿಂಚಿದ್ದಾರೆ.

ಒಟ್ಟಾರೆಯಾಗಿ 141 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆಯುವುದರ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿಗಳ ಈ ಅಭೂತಪೂವ ಯಶಸ್ಸಿಗೆ ಸಂತಸ ವ್ಯಕ್ಯಪಡಿಸಿರುವ ಎಕ್ಸಲೆಂಟ್ ಗ್ರೂಪ್ ಆಫ಼್ ಇನ್ಸಿಟ್ಯೂಷನ್ಸ್‌ನ ಅಧ್ಯಕ್ಷರಾದ ಯುವರಾಜ್‌ಜೈನ್ ನಮ್ಮ ವಿದ್ಯಾರ್ಥಿಗಳ ಶಿಸ್ತುಬದ್ದ ಅಭ್ಯಾಸ, ಪರಿಶ್ರಮ, ಬೋಧಕ ವರ್ಗದವರ ಮಾರ್ಗದರ್ಶನದಿಂದ ಈ ಯಶಸ್ಸು ಲಭಿಸಿದೆ. ಈ ಯಶಸ್ಸಿಗೆ ಶ್ರಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ, ಅವರ ಪೋಷಕರಿಗೆ ಹಾಗೂ ಬೋಧಕ ವರ್ಗಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

ಶೈಕ್ಷಣಿಕವಾಗಿ ಹಿಂದುಳಿದ ರಾಜ್ಯದ ಹಲವು ವಿದ್ಯಾರ್ಥಿಗಳು ಎಕ್ಸಲೆಂಟ್ ವಿದ್ಯಾಸಂಸ್ಥೆಗೆ ಸೇರಿದ ನಂತರ ಅತ್ಯುತ್ತಮ ಫಲಿತಾಂಶ ಪಡೆದಿರುವುದು ಸಂಸ್ಥೆಯ ಉತ್ಕೃಷ್ಟ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಸಂತಸ ವ್ಯಕ್ತಪಡಿಸಿದರು.

ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಈ ಐತಿಹಾಸಿಕ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article