ಸಂತ ಫಿಲೋಮಿನಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಇಂಗ್ಲಿಷ್ ಭಾಷಾ ದಿನಾಚರಣೆ ಮತ್ತು ‘ಲಿಟರೇಚುರ-2K26’ ಸಂಭ್ರಮ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಇಂಗ್ಲಿಷ್ ಭಾಷಾ ದಿನಾಚರಣೆ ಮತ್ತು ‘ಲಿಟರೇಚುರ-2K26’ ಸಂಭ್ರಮ


ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ವತಿಯಿಂದ ‘ಲಿಟರೇಚುರ-2K26’ ಮತ್ತು ಅಂತರಾಷ್ಟ್ರೀಯ ಇಂಗ್ಲಿಷ್ ಭಾಷಾ ದಿನಾಚರಣೆಯನ್ನು ಏಪ್ರಿಲ್ 23 ರಂದು ಕಾಲೇಜಿನ ಎಸ್ಜೆಎಂ ಸಭಾಂಗಣದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಫಾ. ಡಾ. ಆಂಟನಿ ಪ್ರಕಾಶ್ ಮೊಂತೇರೋ ಅವರು ಮಾತಾನಾಡಿ, ಅಂತರಾಷ್ಟ್ರೀಯ ಇಂಗ್ಲೀಷ್ ಭಾಷೆಯ ಪ್ರಾಮುಖ್ಯತೆಯನ್ನು ತಿಳಿಸಿ, ನಮ್ಮ ಜೀವನದಲ್ಲಿ ನಮಗೆ ಗುಣಮಟ್ಟ ಬೇಕು, ಶಿಸ್ತು ಬೇಕು ಮತ್ತು ಒಂದು ರೀತಿಯ ಗಂಭೀರತೆ ಇರಬೇಕು. ನಾವು ಆಚರಿಸುವ ಯಾವುದೇ ಭಾಷೆಗೆ ಗೌರವ ಸಿಗುವುದು ಆ ಭಾಷೆಗೆ ನಾವು ಎಷ್ಟು ಮೌಲ್ಯ ನೀಡುತ್ತೇವೆ ಎಂಬುದರ ಮೇಲೆ ಮಾತ್ರ ಎಂಬುದನ್ನು ನಾವು ಸದಾ ನೆನಪಿನಲ್ಲಿಡಬೇಕು. ಆದ್ದರಿಂದ, ನಿಮ್ಮ ಅಂತರಾತ್ಮದಿಂದ ಸಂವಹನ ನಡೆಸಿ, ನಿಮ್ಮ ವ್ಯಕ್ತಿತ್ವದ ಮೂಲಕ ಸಂವಹನ ನಡೆಸಿ ಎಂದು ಹೇಳಿದರು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ಯಾಂಕ್ ಆಫ್ ಬರೋಡಾ ಪುತ್ತೂರು ಪ್ರಾದೇಶಿಕ ಕಚೇರಿಯ ಸಹಾಯಕ ಜನರಲ್ ಮ್ಯಾನೇಜರ್ ಮತ್ತು ಉಪ ಪ್ರಾದೇಶಿಕ ಮುಖ್ಯಸ್ಥ ಅಮಿತ್ ಸಿ. ಶೆಟ್ಟಿ ಮಾತನಾಡಿ, ನಮ್ಮ ಸುತ್ತಮುತ್ತ ಅನೇಕ ಮಾದರಿ ವ್ಯಕ್ತಿಗಳಿದ್ದಾರೆ ತಮ್ಮ ಜೀವನದಲ್ಲಿ ಮೌಲ್ಯವನ್ನು ಸೃಷ್ಟಿಸಿಕೊಂಡಿರುವ ಮತ್ತು ಸಮಾಜದಲ್ಲಿ ಧನಾತ್ಮಕ ಬದಲಾವಣೆಗಳನ್ನು ತಂದಿರುವ ನಾಯಕರನ್ನು ನಾವು ಆದರ್ಶವಾಗಿ ತೆಗೆದುಕೊಳ್ಳಬೇಕು. ನಿಮ್ಮ ಗುರಿಗಳ ಬಗ್ಗೆ ನಿಮಗೆ ಅರಿವಿರಬೇಕು ಎಂದು  ಹೇಳಿದರು. 


ಅಂತರಾಷ್ಟ್ರೀಯ ಇಂಗ್ಲಿಷ್ ಭಾಷಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಸ್ಪರ್ಧೆಗಳ ವಿಜೇತರಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು.

ಖ್ಯಾತ ಪ್ರೊ ಕಬಡ್ಡಿ ಆಟಗಾರ, ತರಬೇತುದಾರ ಹಾಗೂ ಬ್ಯಾಂಕ್ ಆಫ್ ಬರೋಡಾ ಪುತ್ತೂರು ಉದ್ಯೋಗಿ ಪ್ರಶಾಂತ್ ರೈ, ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಎಸ್. ರೈ ಮತ್ತು ಕಾಲೇಜಿನ ವಿದ್ಯಾರ್ಥಿ ಮತ್ತು ಉಪನ್ಯಾಸಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಮಾನಸ ಮತ್ತು ಪ್ರಥಮ ಬಿ.ಎಸ್ಸಿ ಅಪರ್ಣಾ ಪ್ರಾರ್ಥಿಸಿದರು. ದ್ವಿತೀಯ ಬಿ.ಕಾಂ ಅಪೂರ್ವ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದ್ವಿತೀಯ ಬಿಬಿಎ ಪ್ರಿಯಾ ಅತಿಥಿಯನ್ನು ಪರಿಚಯಿಸಿದರು. ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಶೀತಲ್ ರೈ ಸ್ವಾಗತಿಸಿ, ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಐಶ್ವರ್ಯ ವಂದಿಸಿದರು. ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಆಯಿಷತ್ ಜಬೀನಾ ಕಾರ್ಯಕ್ರಮವನ್ನು ನಿರೂಪಿಸಿದರು. ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ನೋವೆಲಿನ್ ಡಿ’ಸೋಜಾ, ಸುಷ್ಮ ಕ್ರಾಸ್ತ ಹಾಗೂ ವಿನಿಲ್ ರೋಹನ್ ಡಿ’ಸೂಜಾ ಸಹಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article