ರಸ್ತೆ ಬದಿ ಕಸ ಎಸೆಯುವವರಿಗೆ, ಸುಡುವವರಿಗೆ: ತೆಂಕಮಿಜಾರು ಪಂಚಾಯತ್ ನಿಂದ ರೂ.1000 ದಂಡ
Friday, April 17, 2026
ಮೂಡುಬಿದಿರೆ: ತಾಲೂಕಿನ ತೆಂಕಮಿಜಾರು ಗ್ರಾ. ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿ ಕಸ ಎಸೆಯುವುದು ಹಾಗೂ ಸುಡುವುದು ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಪಂಚಾಯತ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ರಸ್ತೆ ಬದಿ ಕಸ ಬಿಸಾಡುವುದು, ಸುಡುವುದು ಮತ್ತು ಏಕಬಳಕೆಯ ಪ್ಲಾಸ್ಟಿಕ್ ಅಂಗಡಿಗಳಲ್ಲಿ ಬಳಸುವುದು ಕಂಡು ಬಂದರೆ ರೂ. 1000 ದಂಡ ವಿಧಿಸಲಾಗುವುದು. ತಪ್ಪಿದ್ದಲ್ಲಿ ಅಂತವರ ವಿರುದ್ಧ ಎಫ್. ಐ. ಆರ್. ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ವಿ. ಸೂ: ರಸ್ತೆ ಬದಿ ತ್ಯಾಜ್ಯ ಎಸೆಯುವವರ ಬಗ್ಗೆ ಸೂಕ್ತ ದಾಖಲೆಯೊಂದಿಗೆ ಮಾಹಿತಿ ನೀಡಿದರೆ ಗ್ರಾಮ ಪಂಚಾಯತ್ ವತಿಯಿಂದ ಬಹುಮಾನ ನೀಡಲಾಗುವುದು ಎಂದೂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.