ಮೂಡುಬಿದಿರೆ ಬಿಆರ್ ಪಿ ಶಾಲೆಗೆ ಶೇಕಡಾ 100 ಫಲಿತಾಂಶ

ಮೂಡುಬಿದಿರೆ ಬಿಆರ್ ಪಿ ಶಾಲೆಗೆ ಶೇಕಡಾ 100 ಫಲಿತಾಂಶ


ಮೂಡುಬಿದಿರೆ: ಮಾಚ್೯ನಲ್ಲಿ ನಡೆದ ಎಸ್ ಎಸ್ ಎಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಬಾಬುರಾಜೇಂದ್ರ ಪ್ರಸಾದ್ ಪ್ರೌಢಶಾಲೆಯು  ಶೇ. 100 ಫಲಿತಾಂಶ ದಾಖಲಿಸಿದೆ. 

ಪರೀಕ್ಷೆಗೆ ಹಾಜರಾಗಿರುವ 67 ವಿದ್ಯಾರ್ಥಿಗಳೂ ಉತ್ತೀಣ೯ರಾಗಿದ್ದು ಅದರಲ್ಲಿ 40ಮಂದಿ ಪ್ರಥಮ ದಜೆ೯ ಹಾಗೂ 14 ಮಂದಿ ದ್ವಿತೀಯ ದಜೆ೯ಯಲ್ಲಿ ಉತ್ತೀಣ೯ರಾಗಿದ್ದಾರೆ. 13ಮಂದಿ ಪಾಸ್ ವಗ೯ದಲ್ಲಿ ತೇಗ೯ಡೆಯಾಗಿದ್ದಾರೆ.

ಬಿಂದುಶ್ರೀ 550 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. 542 ಅಂಕಗಳನ್ನು ಪಡೆದಿರುವ ಸುದೀಶ್ ದ್ವಿತೀಯ ಸ್ಥಾನ, 541 ಅಂಕಗಳನ್ನು ಪಡೆದಿರುವ ಆಕಾಶ್ ತೃತೀಯ ಸ್ಥಾನಿಯಾಗಿದ್ದಾರೆ. 

ಶಾಲೆಯ ಮಕ್ಕಳ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್, ಮುಖ್ಯ ಶಿಕ್ಷಕಿ ತೆರೆಜಾ ಹಾಗೂ ಶಿಕ್ಷಕ ವಗ೯ದವರು ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article