ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೂಡುಬಿದಿರೆ ತಾಲೂಕಿನ  25 ಪ್ರೌಢಶಾಲೆಗಳಿಗೆ ಶೇ. 100 ಫಲಿತಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೂಡುಬಿದಿರೆ ತಾಲೂಕಿನ 25 ಪ್ರೌಢಶಾಲೆಗಳಿಗೆ ಶೇ. 100 ಫಲಿತಾಂಶ

ಮೂಡುಬಿದಿರೆ: ಮಾಚ್೯ ತಿಂಗಳಿನಲ್ಲಿ ನಡೆದ ಎಸ್. ಎಸ್. ಎಲ್ಸಿ ಪರೀಕ್ಷೆಯಲ್ಲಿ ಮೂಡುಬಿದಿರೆ ತಾಲೂಕಿನ 25 ಪ್ರೌಢಶಾಲೆಗಳು ಶೇ. 100 ಫಲಿತಾಂಶವನ್ನು ದಾಖಲಿಸುವ ಮೂಲಕ ಮೂಡುಬಿದಿರೆ ತಾಲೂಕು ದ. ಕ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದೆ. 

ಶೇ.100 ಫಲಿತಾಂಶ ಪಡೆದ ಪ್ರೌಢಶಾಲೆಗಳು:

ಸರಕಾರಿ ಪ್ರೌಢಶಾಲೆ ಮೂಡುಮಾರ್ನಾಡು,ಆಳ್ವಾಸ್ ಕನ್ನಡ ಮಾಧ್ಯಮ, ರೋಟರಿ ಆಂಗ್ಲಮಾಧ್ಯಮ ಹೈಸ್ಕೂಲ್, ಜೈನ್ ಹೈಸ್ಕೂಲ್, ಜವಾಹರಲಾಲ್ ನೆಹರು ಹೈಸ್ಕೂಲ್ ಶಿರ್ತಾಡಿ, ಸರ್ವೋದಯ ಕಲ್ಲಮುಂಡ್ಕೂರು, ಸರಕಾರಿ ಹೈಸ್ಕೂಲ್ ಹೊಸಬೆಟ್ಟು, ಸರಕಾರಿ ಹೈಸ್ಕೂಲ್ ದರೆಗುಡ್ಡೆ, ಬಿ.ಆರ್.ಪಿ, ಮೂಡುಬಿದಿರೆ, ಹೋಲಿ ರೋಸರಿ, ಮೂಡುಬಿದಿರೆ, ಸರಕಾರಿ ಪ್ರೌಢಶಾಲೆ ಪ್ರಾಂತ್ಯ, ಸುಬ್ರಹ್ಮಣ್ಯ ಪ್ರೌಢಶಾಲೆ ಕಡಂದಲೆ, ನೆಲ್ಲಿಕಾರು, ಮೊರಾರ್ಜಿ ದೇಸಾಯಿ ಕಲ್ಲಬೆಟ್ಟು, ಸಂತ ಥೋಮಸ್, ಅಲಂಗಾರು, ಸರಕಾರಿ ಹೈಸ್ಕೂಲ್ ನೀರ್ಕೆರೆ, ಮುಹಮ್ಮದೀಯ ಕೋಟೆಬಾಗಿಲು, ಸರಕಾರಿ ಹೈಸ್ಕೂಲ್, ಪಡುಕೊಣಾಜೆ, ಮೌಂಟ್‌ ಕಾರ್ಮೆಲ್, ಶಿರ್ತಾಡಿ, ದುರ್ಗಾದೇವಿ ಶುಂಠಿಲಪದವು, ಬ್ಲಾಸಮ್ ಬೆಳುವಾಯಿ, ದಿಗಂಬರ ಜೈನ ಮೂಡುಬಿದಿರೆ, ಎಕ್ಸಲೆಂಟ್ ಕಲ್ಲಬೆಟ್ಟು, ಸಂತ ಇಗ್ನೇಷಿಯಸ್ ಪಾಲಡ್ಕ, ಆದರ್ಶ ತೋಡಾರ್ ಶೇ. 100 ಫಲಿತಾಂಶ ದಾಖಲಿಸಿದ ಶಾಲೆಗಳು.

ಹೊಸಬೆಟ್ಟು ಸರ್ಕಾರಿ ಪ್ರೌಢಶಾಲೆ ಎಸ್ ಶಾಲೆಯ ಒಟ್ಟು 15 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಉತ್ತೀರ್ಣರಾಗಿದ್ದಾರೆ. ಇವರಲ್ಲಿ 7 ಮಂದಿ ಡಿಸ್ಟಿಂಕ್ಷನ್, 4 ಮಂದಿ ಪ್ರಥಮ ಶ್ರೇಣಿ ಹಾಗೂ 4 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ತನ್ವಿ (574), ಸಾನಿಧ್ಯಾ (560), ತನಿಷ್ಕ್ (551), ನೂತನ್ (551), ಸುಜನ್ ಎಸ್. (547), ರಕ್ಷಿತಾ (546) ಮತ್ತು ಕೀರ್ತನ್ (507) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಗಳಿಸಿದ್ದಾರೆ.

ಸರ್ವೋದಯ ಪ್ರೌಢ ಶಾಲೆ ಕಲ್ಲಮುಂಡ್ಕೂರು ಶೇ.100 ಫಲಿತಾಂಶ ಸಾಧಿಸಿದೆ.

ಶಾಲೆಯಿಂದ ಒಟ್ಟು 25 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಉತ್ತೀರ್ಣರಾಗಿದ್ದಾರೆ. ಓರ್ವ ವಿದ್ಯಾರ್ಥಿ ಡಿಸ್ಟಿಂಕ್ಷನ್, 15 ಮಂದಿ ಪ್ರಥಮ ಶ್ರೇಣಿ ಹಾಗೂ 9 ಮಂದಿ ಉತ್ತೀರ್ಣರಾಗಿದ್ದಾರೆ. ತುಳಸಿ 549 ಹಾಗೂ ದೀಕ್ಷಿತ್ 506 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಪಾಲಡ್ಕ ಸಂತ ಇಗ್ನೇಶಿಯಸ್ ಆಂಗ್ಲ ಮಾಧ್ಯಮ ಶಾಲೆಯು ಶೇ.100 ಫಲಿತಾಂಶ ದಾಖಲಿಸಿ ಸತತ ಎಂಟು ವರ್ಷಗಳ ಸಾಧನೆಯನ್ನು ಮುಂದುವರಿಸಿದೆ.

ಒಟ್ಟು 41 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಇವರಲ್ಲಿ 22 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಹಾಗೂ 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಕಡಂದಲೆದಲ್ಲಿರುವ ಶ್ರೀ ಸುಬ್ರಮಣ್ಯ ಸ್ವಾಮಿ ಪ್ರೌಢಶಾಲೆ  ಪರೀಕ್ಷೆಗೆ ಹಾಜರಾದ 10ನೇ ತರಗತಿಯ 43 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದಾರೆ.

ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯಲ್ಲಿ ಒಟ್ಟು 67 ವಿದ್ಯಾರ್ಥಿಗಳೆಲ್ಲ ಉತೀರ್ಣರಾಗಿದ್ದಾರೆ. 40 ಮಂದಿ ಪ್ರಥಮ ದರ್ಜೆಯಲ್ಲಿ, 14 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಶಾಲೆಯಲ್ಲಿ ಬಿಂದುಶ್ರೀ 550 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಸುದೀಶ್ 542 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಆಕಾಶ್ 541 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article