ಏ.26 ರಂದು ಸುವಣ೯ಕನಾ೯ಟಕ ರಾಜ್ಯ ಸಮಿತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ
ಮೂಡುಬಿದಿರೆ: ಸುವಣ೯ ಕನಾ೯ಟಕ ರಾಜ್ಯ ಸಮಿತಿ ಜೈ ಭೀಮ್ ಯುವ ಸೇನೆ ವತಿಯಿಂದ ಏ. 26ರಂದು ಸಮಾಜ ಮಂದಿರದಲ್ಲಿ 135ನೇ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುವುದು ಎಂದು ಸಂಘಟನೆಯ ರಾಜ್ಯಾಧ್ಯಕ್ಷ ವತೂ೯ರು ಮಂಜುನಾಥ್ ಹೇಳಿದರು.
ಅವರು ಗುರುವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ವಷ೯ ಜಯಂತಿಯ ಪ್ರಯುಕ್ತ ನಮ್ಮ ಸಮಿತಿಯ ವತಿಯಿಂದ ಬಡ ಕುಟುಂಬಗಳಿಗೆ ಮನೆಯನ್ನು ಕಟ್ಟಿಕೊಡುತ್ತೇವೆ ಎಂದು ಭರವಸೆ ನೀಡಿದ್ದೆವು ವಷ೯ದ ಅಂತ್ಯದಲ್ಲಿ ಎರಡು ಮನೆಗಳನ್ನು ನಿಮಿ೯ಸಿಕೊಟ್ಟಿದ್ದೇವೆ. ಈ ಸಂದಭ೯ದಲ್ಲಿ ನಾಲ್ಕು ಬಡ ಕುಟುಂಬದವರಿಗೆ, ಆಥಿ೯ಕ ನೆರವು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದಿರುವ ಮಕ್ಕಳಿಗೆ ಸನ್ಮಾನ ಮತ್ತು ಪ್ರೋತ್ಸಾಹ ಧನ ನೀಡಲಾಗುವುದು.
ಸಮಿತಿಯು ಬಡವರಿಗಾಗಿ ಕೆಲಸ ಮಾಡುತ್ತಿದ್ದು ಅಂಬೇಡ್ಕರ್ ಸಿದ್ಧಾಂತವನ್ನು ಪಾಲನೆ ಮಾಡುತ್ತಾ ಆದಷ್ಟು ಅಭಿವೃದ್ಧಿ ಕಡೆಗೆ ಕೊಂಡೊಯ್ಯುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ ಎಂದರು.
ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮನೋಜ್ ಹಾಗೂ ತಾಲೂಕು ಉಪಾಧ್ಯಕ್ಷ ರಂಜಿತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.