ಏ.30 ರೊಳಗೆ ಆಸ್ತಿ ತೆರಿಗೆ ಪಾವತಿಸಿದಲ್ಲಿ ಶೇ.5 ರಷ್ಟು ರಿಯಾಯಿತಿ

ಏ.30 ರೊಳಗೆ ಆಸ್ತಿ ತೆರಿಗೆ ಪಾವತಿಸಿದಲ್ಲಿ ಶೇ.5 ರಷ್ಟು ರಿಯಾಯಿತಿ


ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಯ ವಾಸದ ಮನೆಗಳು, ವಾಣಿಜ್ಯ ಕಟ್ಟಡಗಳು ಹಾಗೂ ಖಾಲಿ ನಿವೇಶನಗಳ ಮಾಲೀಕರು 2026-27ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ 30 ರೊಳಗೆ ಪಾವತಿಸಿದಲ್ಲಿ ತೆರಿಗೆ ಮೊತ್ತದ ಮೇಲೆ ಶೇ. 5 ರಷ್ಟು ರಿಯಾಯಿತಿ ದೊರೆಯಲಿದೆ. 

ಜೂನ್ 30 ರವರೆಗೆ ಯಾವುದೇ ದಂಡವಿಲ್ಲದೆ ತೆರಿಗೆ ಪಾವತಿಸಲು ಅವಕಾಶವಿದೆ. ಜುಲೈ 1 ರ ನಂತರ ಪಾವತಿಸುವ ತೆರಿಗೆ ಮೊತ್ತದ ಮೇಲೆ ಪ್ರತಿ ತಿಂಗಳಿಗೆ ಶೇ. 2 ರಷ್ಟು ದಂಡ ವಿಧಿಸಲಾಗುವುದು. ಸಾರ್ವಜನಿಕರು ಏಪ್ರಿಲ್ ಅಂತ್ಯದೊಳಗೆ ತೆರಿಗೆ ಪಾವತಿಸಿ ರಿಯಾಯಿತಿ ಸೌಲಭ್ಯ ಬಳಸಿಕೊಳ್ಳಬೇಕು. ಇದರೊಂದಿಗೆ ಬಾಕಿ ಇರುವ ನೀರಿನ ಶುಲ್ಕ, ಪರವಾನಿಗೆ ಶುಲ್ಕ ಹಾಗೂ ಜಾಹೀರಾತು ಶುಲ್ಕಗಳನ್ನು ಪಾವತಿಸುವ ಮೂಲಕ ಪುರಸಭೆಯ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸಬೇಕು ಎಂದು ಪುರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article