ತಂತ್ರಜ್ಞಾನ ಬಳಕೆಯ ನಡುವೆ ಚಿಂತನಾ ಶಕ್ತಿ ಕಾಪಾಡಿಕೊಳ್ಳಿ: ಅತುಲ್ ಭಟ್
ಆದ್ದರಿಂದ ವಿದ್ಯಾರ್ಥಿಗಳು ಸ್ವತಃ ಆಕಾಶವನ್ನು ಗಮನಿಸಿ ನಕ್ಷತ್ರಗುಚ್ಛಗಳನ್ನು ಗುರುತಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಆಕಾಶವನ್ನು ಒಂದು ಮಟ್ಟಿಗೆ ಅರ್ಥಮಾಡಿಕೊಂಡಿದ್ದರೂ, ಸಹ ಚಿಕ್ಕ ವಯಸ್ಸಿನಿಂದಲೇ ಅನ್ವೇಷಿಸುವುದು ಒಳ್ಳೆಯ ಹವ್ಯಾಸ. ಆಕಾಶ ಮತ್ತು ಸಮುದ್ರದಲ್ಲಿ ಅನ್ವೇಷಿಸಲು ಇನ್ನೂ ಅನೇಕ ವಿಷಯಗಳಿವೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಭೂಭಾಗದಲ್ಲಿಯೂ ಈಗಾಗಲೇ ಅನೇಕ ವಿಷಯಗಳನ್ನು ಅನ್ವೇಷಿಸಲಾಗಿದೆ ಆದರೂ ಪ್ರತಿಯೊಬ್ಬರಿಗೂ ಅಪಾರ ಅವಕಾಶಗಳಿವೆ. ಆ ಅವಕಾಶಗಳನ್ನು ಬಳಸಿಕೊಳ್ಳುವುದು ನಮ್ಮ ಕೈಯಲ್ಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾದ ನಾಸಾ ವಿಜ್ಞಾನಿ ಪ್ರಕೃತಿ ಪ್ರಕಾಶ್ ಶಾಲಾ ಪ್ರಾಂಶುಪಾಲರಾದ ಶೈಲಜಾ ಬೋಳ ಹೆಗ್ಡೆ ಶಾಲಾ ಆಡಳಿತ ಅಧಿಕಾರಿ ನಿತೇಶ್ ಮಾರ್ನಾಡ್ ಸಹಾಯಕ ಆಡಳಿತ ಅಧಿಕಾರಿ ರಾಜೇಶ್, ಕಾಯ೯ಕ್ರಮ ಸಂಯೋಜಕಕರಾದ ಸೌಮ್ಯ ಆದಿತ್ಯ, ಅಶ್ವಿನಿ ಪ್ರಭು ಉಪಸ್ಥಿತರಿದ್ದರು.
ನಿಶಾ ರೋಡ್ರಿಗಸ್ ಕಾಯ೯ಕ್ರಮ ನಿರೂಪಿಸಿದರು.

