ಬೆಳುವಾಯಿಯಲ್ಲಿ 45 ವಷ೯ಗಳ ನಂತರ ನಡೆದ ಅಪರೂಪದ ಗುಡ್ಜಿ ನೇಮ

ಬೆಳುವಾಯಿಯಲ್ಲಿ 45 ವಷ೯ಗಳ ನಂತರ ನಡೆದ ಅಪರೂಪದ ಗುಡ್ಜಿ ನೇಮ


ಮೂಡುಬಿದಿರೆ: ಬೆಳುವಾಯಿ ಗ್ರಾಮದಲ್ಲಿ 45 ವರ್ಷಗಳ ಬಳಿಕ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಗುತ್ತಿನಾರ್ ನರೇಶ್ ಶೆಟ್ಟಿ ಬರಕಳಗುತ್ತು ನೇತೃತ್ವದಲ್ಲಿ ಗುಡ್ಜಿ ನೇಮವು ಶ್ರೀ ಕುಕ್ಕಿನಂತ್ತಾಯ, ಕೊಡಮಣಿತ್ತಾಯ, ವ್ಯಾಘ್ರಚಾಮುಂಡಿ-ಪಂಜುರ್ಲಿ ಹಾಗೂ ಬ್ರಹ್ಮಬೈದರ್ಕಳ ದೈವಸ್ಥಾನ ಕಲ್ಲೋಳಿ ಪಾದೆ ಬಾಕಿಮಾರು ಗದ್ದೆಯಲ್ಲಿ ಮಂಗಳವಾರ ರಾತ್ರಿ ನಡೆಯಿತು. 

ಬಾಕಿಮಾರು ಗದ್ದೆಯಲ್ಲಿ ವಿಶಾಲವಾದ ಚಪ್ಪರ, ದೈವಗಳ ಹೊಸ ಮಂಚ, 4 ಕಂಬಗಳಿಂದ 9 ಅಂತಸ್ತುಗಳನ್ನು ಒಳಗೊಂಡ ಗುಡ್ಜಿಯನ್ನು ನಿರ್ಮಿಸಲಾಗಿತ್ತು.


ಎಲ್ಲಾ ಹೊಸ ಪರಿಕರಗಳಿಂದಲೇ ಗುಡ್ಜಿ ನೇಮ ನಡೆಸುವುದು ವಿಶೇಷತೆಯಾಗಿದೆ.

ಬೆಳಗ್ಗೆ ಭಂಡಾರ ಆಗಮನದ ಬಳಿಕ ಗಣಪತಿ ಹೋಮ ನಡೆಯಿತು. ರಾತ್ರಿ ರಾಜನ್‌ದೈವ ಕುಕ್ಕಿನಂತಾಯಿ-ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ, ಪಿಲಿಚಾಮುಂಡಿ, ಪಂಜುರ್ಲಿ ದೈವಗಳ ನೇಮ ನಡೆಯಿತು. ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article