ಫಿಲೋಮಿನಾ ಕಾಲೇಜಿನ ತೇಜಸ್ವಿ ಭಟ್ ಸಬ್‌ಲೆಪ್ಟಿನೆಂಟ್

ಫಿಲೋಮಿನಾ ಕಾಲೇಜಿನ ತೇಜಸ್ವಿ ಭಟ್ ಸಬ್‌ಲೆಪ್ಟಿನೆಂಟ್


ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ತೇಜಸ್ವಿ ಭಟ್ ಕೆ  ನಾಗ್ಪುರದ  ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ನಡೆಯುವ ಪ್ರತಿಷ್ಠಿತ ಪ್ರೀ-ಕಮಿಷನ್ ಕೋರ್ಸ್  ಯಶಸ್ವಿಯಾಗಿ ಪೂರ್ಣಗೊಳಿಸಿ ರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸ್ ನಲ್ಲಿ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ. 

ಜನವರಿ 5ರಿಂದ ಏಪ್ರಿಲ್ 4, 2026 ರವರೆಗೆ ನಡೆದ ಈ ತರಬೇತಿಯಲ್ಲಿ, ಅವರು ಕೆಡೆಟ್ ಗಳಿಗೆ  ಮಾರ್ಗದರ್ಶನ ನೀಡಲು ವಿನ್ಯಾಸಗೊಳಿಸಲಾದ ನಾಯಕತ್ವ, ಶಿಸ್ತು ಮತ್ತು  ಸಂಘಟನಾ ಚಾತುರ್ಯ ಮುಂತಾದ ವಿಷಯಗಳ ಕುರಿತು ತರಬೇತಿ ಪಡೆದುಕೊಂಡರು. ಅಕಾಡೆಮಿ ಮಹಾನಿರ್ದೇಶಕರು ಸಬ್ ಲೆಫ್ಟಿನೆಂಟ್  ಪದವಿಯನ್ನು ನೀಡಿದರು.

ತೇಜಸ್ವಿ ಭಟ್ ಕೆ ತಮ್ಮ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಸಂತ ಫಿಲೋಮಿನಾ  ಪದವಿಪೂರ್ವ ಕಾಲೇಜಿನಲ್ಲಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿ, ಹತ್ತು ವರ್ಷಗಳಿಂದ ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಈ ಸಾಧನೆಗೆ ಕಾಲೇಜಿನ ಸಂಚಾಲಕರಾದ ಅತಿ.ವಂ. ಲಾರೆನ್ಸ್ ಮಸ್ಕರೆನ್ಹಾಸ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  

ತೇಜಸ್ವಿ ಭಟ್ ಕೆ ನಮ್ಮ ಕಾಲೇಜಿನ ಹೆಮ್ಮೆಯ ಹಿರಿಯ ವಿದ್ಯಾರ್ಥಿ. ತಮ್ಮ ವಿದ್ಯಾರ್ಥಿ ದಿನಗಳಲ್ಲಿ  ಸೀನಿಯರ್ ಅಂಡರ್‌ಆಫೀಸರ್ ಆಗಿದ್ದ ಅವರು ತೀವ್ರ ಪರಿಶ್ರಮ, ಶಿಸ್ತು ಮತ್ತು ಸಮರ್ಪಣೆಯಿಂದ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡಿರುವುದು ಅಭಿನಂದನಾದಾಯಕ ಎಂದು  ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article