ಸಾಯಿ ಮಾರ್ನಾಡ್ ಸೇವಾ ಸಂಘದಿಂದ 92ನೇ ಸೇವಾ ಯೋಜನೆ ಹಸ್ತಾಂತರ

ಸಾಯಿ ಮಾರ್ನಾಡ್ ಸೇವಾ ಸಂಘದಿಂದ 92ನೇ ಸೇವಾ ಯೋಜನೆ ಹಸ್ತಾಂತರ


ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ ಅಮನಬೆಟ್ಟು, ಪಡುಮಾರ್ನಾಡ್ ಇದರ ಸೇವಾ ಯೋಜನೆ 92 ಮಾರ್ಚ್ ತಿಂಗಳ 2ನೇ ಯೋಜನೆಯನ್ನು ಆನಾರೋಗ್ಯ ಹೊಂದಿರುವ ಒಂಟಿಕಟ್ಟೆಯ ಸಂತೋಷ್ ನಾಯ್ಕ್ ಅವರ ಚಿಕಿತ್ಸೆಗೆ ರೂ. 10,000ನ್ನು ಹಸ್ತಾಂತರಿಸಲಾಯಿತು.

ಮೂಡುಬಿದಿರೆ ತಾಲೂಕಿನ ಮಾಪಾ೯ಡಿ ಗ್ರಾಮದ ಒಂಟಿಕಟ್ಟೆ ಪರಿಸರದ ಸಂತೋಷ್ ನಾಯ್ಕ್ ಅವರು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದು ಇವರಿಗೆ 2 ತಿಂಗಳ ಹಿಂದೆ ರಕ್ತದೊತ್ತಡ(ಬಿಪಿ)ಯಿಂದ ಸ್ಟ್ರೋಕ್ ಆಗಿ ಪಾಶ್ವ೯ವಾಯುಗೆ ತುತ್ತಾಗಿದ್ದು ಈಗ ಕೆಲಸ ಮಾಡಲು ಆಗುತ್ತಿಲ್ಲ. ಇವರಿಗೆ ಹೆಂಡತಿ,  2 ಗಂಡು ಮಕ್ಕಳಿದ್ದು 9ನೇ ಮತ್ತು 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರ ಮನೆಯ ದೈನಂದಿನ ಖರ್ಚು ಹಾಗೂ ಇವರ ಮದ್ದಿಗೆ ಹಣ ಹೊಂದಿಸಲು ಕಷ್ಟ ಆಗಿರುವುದರಿಂದ  ಸೇವಾ ಸಂಘದಿಂದ  ಧನ ಸಹಾಯವನ್ನು ಹಸ್ತಾಂತರಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article