ಸೂರಿಂಜೆ ಬೊಳ್ಳಾರಗೋಳಿಯಲ್ಲಿ ಪಂಚ ದೈವಗಳ ನೇಮೋತ್ಸವದಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಅನಾವರಣಗೊಂಡಿದೆ: ಶ್ರೀ ವಿದ್ಯಾಧೀಶ ಸ್ವಾಮೀಜಿ
ಅವರು ಸೂರಿಂಜೆ ಬೊಳ್ಳಾರುಗುತ್ತಿನ ಬಾಕಿ ಮಾರು ಗದ್ದೆಯಲ್ಲಿ ನಡೆದ ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರದಲ್ಲಿ ಆಶೀರ್ವದಿಸಿ ಮಾತನಾಡಿದರು.
ಬೊಳ್ಳಾರಗೋಳಿಯಲ್ಲಿ ನಡೆದ ನೇಮೋತ್ಸವ ಸಮಗ್ರ ಕರಾವಳಿಯ ಅಭಿವೃದ್ಧಿಗೆ ಮುನ್ನುಡಿಯಾಗಲಿ ಎಂದರು. ವೇದಿಕೆಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣ, ಡಾ. ಗಣೇಶ್ ಅಮೀನ್ ಸಂಕಮಾರ್ ಧಾರ್ಮಿಕ ಉಪನ್ಯಾಸ ನೀಡಿದರು, ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಸುರತ್ಕಲ್ ಜ್ಯೋತಿಷಿ ನಾಗೇಂದ್ರ ಭರದ್ವಾಜ್, ಮುಂಬಯಿ ಹೇರಂಭ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಬರೋಡಾ ಶಶಿ ಕೇಟರರ್ಸ್ ಆಡಳಿತ ನಿರ್ದೇಶಕ ಶಶಿಧರ ಶೆಟ್ಟಿ ಬರೋಡಾ, ಪೂನಾ ಬಂಟರ ಸಂಘದ ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ ಮುಂಬಯಿ ಸಾಯಿ ಪ್ಯಾಲೇಸ್ ಮಾಲಕರಾದ ಮನೋಹರ ಶೆಟ್ಟಿ, ಮುಂಬಯಿ ಉದ್ಯಮಿ ಭಾಸ್ಕರ ಶೆಟ್ಟಿ ಕುಡ್ತಿಮಾರುಗುತ್ತು, ಬೆಂಗಳೂರು ಎಸ್ಸೆಲ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ರಘನಾಥ್ ಸೋಮಯಾಜಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಪ್ರದ್ಯುಮ್ನರಾವ್ ಶಿಬರೂರು, ಉದ್ಯಮಿ ಸತೀಶ್ ಮುಂಚೂರು, ಸುರತ್ಕಲ್ ಆರಕ್ಷಕ ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್, ಹೈಕೋರ್ಟ್ ವಕೀಲರಾದ ರವಿ ಕೋಟ್ಯಾನ್ ಶಿಬರೂರು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುಬ್ರಹ್ಮಣ್ಯ ಪ್ರಸಾದ್ ಕೊರ್ಯಾರು, ವೀಣಾ ಶೆಟ್ಟಿ ಚೇಳೈರುಗುತ್ತು, ಹಯವದನ್ ಭಟ್, ಮುಂಬಯಿ ಉದ್ಯಮಿ ವಿರಾರ್ ಶಂಕರ್ ಶೆಟ್ಟಿ ಉದ್ಯಮಿ, ಉಡುಪಿ ಲಯನ್ಸ್ ಕ್ಲಬ್ ಮಾಜಿ ಗವರ್ನರ್ ಸುರೇಶ್ ಶೆಟ್ಟಿ, ವಿಜಯ ಅರ್ ಭಂಡಾರಿ, ಆನಂದ ಶೆಟ್ಟಿ ಬೊಳ್ಳಾರುಗುತ್ತು, ಅನಿಲ್ ಶೆಟ್ಟಿ ತೇವು ಸೂರಿಂಜೆ, ಪಂಚ ದೈವಗಳ ನೇಮೋತ್ಸವ ಸಮಿತಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಕುಡ್ತಿಮಾರುಗುತ್ತು, ಕಾರ್ಯಾಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಮೋಹನ್ ದಾಸ್ ಶೆಟ್ಟಿ, ಯೋಗೀಶ್ ಶೆಟ್ಟಿ ಮುಂಬಯಿ, ಕೃಷ್ಣಾನಂದ ಶೆಟ್ಟಿ ಬೊಳ್ಳಾರುಗುತ್ತು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಎಸ್ ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ ವಹಿಸಿದರು.
ನೇಮೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಸೂರಿಂಜೆ ಸ್ವಾಗತಿಸಿ, ರಾಜೇಶ್ ಶೆಟ್ಟಿ ಕೊಡೆತ್ತೂರು ಧನ್ಯವಾದ ಸಮರ್ಪಿಸಿ ನಿತೇಶ್ ಶೆಟ್ಟಿ ಎಕ್ಕಾರ್ ಮತ್ತು ಜ್ಯೋತಿ ಶೆಟ್ಟಿ ಕುತ್ತೆತ್ತೂರು ಕಾರ್ಯಕ್ರಮ ನಿರೂಪಿಸಿದರು.