ಕೊಡಿಪಾಡಿ ಗರಡಿ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರ ಬಿಡುಗಡೆ
ಕ್ಷೇತ್ರಾಡಳಿತ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರೂಪೇಶ್ ರೈ ಮಾತನಾಡಿ, ಬ್ರಹ್ಮಕಲಶೋತ್ಸವ, ಕಾಲಾವಧಿ ಜಾತ್ರಾ ಮಹೋತ್ಸವ ಎ.28ರಿಂದ ಮೇ 3ವರೆಗೆ ನಡೆಯಲಿದೆ. ಕ್ಷೇತ್ರದ ಜೀರ್ಣೋದ್ದಾರ ಸಮಿತಿಗೆ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ತನ್ನ ಭಾಗ್ಯ ಎಂದರು.
ಪೂಜಾ ವಿಧಿಗಳ ನೇತೃತ್ವ ವಹಿಸಿದ್ದ ವೇದಮೂರ್ತಿ ವಿಶ್ಲೇಶ್ ಪೆಜತ್ತಾಯ ಆಶೀರ್ವಚನ ನೀಡಿದರು. ಯಜಮಾನ ಗಡಿ ಪ್ರಧಾನ ಜಗನ್ನಾಥ ಅತ್ತಾರ್, ತೋಕೂರು ಗುತ್ತು ಯಜಮಾನ ದಿವಾಕರ ಆಳ್ವ, ದೇವೇಂದ್ರ ಪೂಜಾರಿ ಮುಕ್ಕ ಭಂಡಾರ ಮನೆ, ಪ್ರಮುಖರಾದ ರಮಾನಾಥ ರೈ, ಸತೀಶ್ ಮುಂಚೂರು, ಮುಂಚೂರು, ಲೋಕಯ್ಯ ಶೆಟ್ಟಿ ಮುಂಚೂರು, ಶೇಖರ ಶೆಟ್ಟಿ ಖಂಡಿಗೆಬೀಡು, ಗೌರವಾಧ್ಯ ಭುಜಂಗ ಶೆಟ್ಟಿ ಕೊಡಿಪಾಡಿಬಾಳಿಕೆ, ಉಪಾಧ್ಯಕ್ಷ ಕಾರ್ತಿಕ್ ಶೆಟ್ಟಿ ಕೊಡಿಪಾಡಿ, ಸಂಚಾಲಕ ಸುರೇಂದ್ರ ಶೆಟ್ಟಿ ಕೊಡಿ ಬಾಳಿಕೆ, ಪ್ರಧಾನ ಕಾರ್ಯದರ್ಶಿ ಅಭಿಲಾಷ್ ಶೆಟ್ಟಿ, ಕೊಡಿಪಾಡಿ ಬಾಳಿಕೆ, ಕಾರ್ಯದರ್ಶಿ ರತನ್ ಶೆಟ್ಟಿ, ಆನಂದ ಶೆಟ್ಟಿಗಾರ್, ಪುಷ್ಪರಾಜ್ ಕರ್ಕೇರ ಮುಕ್ಕ ಹಾಗೂ ಪ್ರಶಾಂತ್ ಎಸ್.ಎಂ., ರೂಪೇಶ್ ಶೆಟ್ಟಿ ವಿಶ್ವನಾಥ ಶೆಟ್ಟಿ ಸುಜೀರ್ ಸುವರ್ಣ, ಹರೀಶ್ ಮುಂಚೂರು, ನಾನಾ ಕ್ಷೇತ್ರಗಳ ಗಡಿ ಪ್ರಧಾನರು, ಉಪ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.