ಮುಳೂರು-ಅಡ್ಡೂರು ಜೋಡುಕರೆ ಕಂಬಳ ತುಳುನಾಡಿನ ಸಂಸ್ಕೃತಿ ದೇಶಕ್ಕೆ ಕಲಶವಿದ್ದಂತೆ: ಡಿ.ಕೆ. ಸುರೇಶ್

ಮುಳೂರು-ಅಡ್ಡೂರು ಜೋಡುಕರೆ ಕಂಬಳ ತುಳುನಾಡಿನ ಸಂಸ್ಕೃತಿ ದೇಶಕ್ಕೆ ಕಲಶವಿದ್ದಂತೆ: ಡಿ.ಕೆ. ಸುರೇಶ್


ಮಂಗಳೂರು: ತುಳುನಾಡಿನ 'ಸಂಸ್ಕೃತಿ ದೇಶಕ್ಕೆ ಕಲಶವಿದ್ದಂತೆ. ಕಂಬಳ ಕ್ರೀಡೆಯಲ್ಲ ಧಾರ್ಮಿಕ ಸಂಕೇತ. ನಗರೀಕರಣ ಸಂದರ್ಭದಲ್ಲಿ ನಮ್ಮ ಸಂಸ್ಕೃತಿಯನ್ನು  ಉಳಿಸಬೇಕಾದ ಆವಶ್ಯಕತೆ ಯುವಜನರಲ್ಲಿದೆ ಎಂದು (ಬಮುಲ್‌)ದ ಬೆಂಗಳೂರು ಹಾಲು ಒಕ್ಕೂಟ ಅಧ್ಯಕ್ಷ ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.

ಮುಳೂರು ಅಡ್ಡೂರು ಜೋಡುಕರೆ ಕಂಬಳ ಸಮಿತಿ ವತಿಯಿಂದ ಗುರುಪುರ ಮಾಣಿಬೆಟ್ಟು ಗುತ್ತುವಿನಲ್ಲಿ ನಡೆದ 'ಗುರುಪುರ ಕಂಬಳ' ಉದ್ಘಾಟಿಸಿ ಮಾತನಾಡಿ, ಕಂಬಳದ ಕೋಣಗಳನ್ನು ಸಿದ್ದಗೊಳಿಸುವುದು, ಓಡಿಸುವುದು ಕಷ್ಟದ ಕೆಲಸ. ಈ ಧಾರ್ಮಿಕ ಪದ್ಧತಿಯನ್ನು ಉಳಿಸುವ ಕೆಲಸ ವನ್ನು ಅನೇಕರು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಕಂಬಳ ಆರಂಭವಾಗುತ್ತದೆ. ಕಂಬಳ ರಾಜ್ಯದೆಲ್ಲೆಡೆ ಪಸರಿಸಬೇಕು ಕೆಪಿಸಿಸಿ ಕಾರ್ಯದರ್ಶಿ  ಇನಾಯತ್ ಅಲಿ ಅವರು ಕಳೆದ ಮೂರು ವರ್ಷಗಳಿಂದ ಕಂಬಳ ಆಯೋಜಿಸಿ ಎಲ್ಲರಿಗೂ ಸ್ಫೂರ್ತಿ ನೀಡಿದ್ದಾರೆ ಎಂದರು.

ಮುಳೂರು-ಅಡ್ವರು ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಇನಾಯತ್ ಅಲಿ ಸ್ವಾಗತಿಸಿ, ಪ್ರಸ್ತಾವಿಸಿ, ಕಂಬಳ ತುಳುನಾಡಿನ ಪರಂಪರೆ ಎಂದು ತಿಳಿಸಿದರು.

ಯು.ಟಿ. ವಿಧಾನಸಭಾಧ್ಯಕ್ಷ ಖಾದರ್, ಮಾಜಿ ಸಚಿವ ಅಭಯಚಂದ್ರ ಜೈನ್, ಶ್ರೀಕ್ಷೇತ್ರ ಕುದ್ರೋಳಿ ಖಜಾಂಚಿ ಪದ್ಮರಾಜ್ ಆರ್. ಪೂಜಾರಿ, ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಜಿಲ್ಲಾ ಕಂಬಳ ಸಮಿತಿ ಪ್ರ.ಕಾ. ಲೋಕೇಶ್ ಶೆಟ್ಟಿ ಆದಾನಿ ಸಂಸ್ಥೆಯ ಕಿಶೋರ್ ಆಳ್ವ ಪ್ರಮುಖರಾದ ಜಗದ ರಶ್ ಅಧಿಕಾರಿ, ದಿನೇಶ್ ಕರ್ಕೇರ, ಕೀರ್ತಿ ಗಣೇಶ್, ವಿನಯಕುಮಾರ್ ಶೆಟ್ಟಿ ಲೋಕೇಶ್ ಶೆಟ್ಟಿ ಕಂಬಳ ಸಮಿತಿ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್, ಸ್ಥಾಪಕಾಧ್ಯಕ್ಷ ರಾಜ್ ಕುಮಾರ್ ಶೆಟ್ಟಿ ತಿರುವೈಲುಗುತ್ತು, ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ಮಾಣಿಬೆಟ್ಟುಗುತ್ತು, ಪ್ರ. ಕಾರ್ಯದರ್ಶಿ ಯಶವಂತಕುಮಾರ್ ಶೆಟ್ಟಿ ಬೆಳ್ಳೂರು ಗುತ್ತು ಸಹಿತ ವಿವಿಧ ಗಣ್ಯರು ಉಪಸ್ಥಿತರಿದ್ದರು.

ಸಾಧಕರಿಗೆ ಸಮ್ಮಾನ:

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸತೀಶ್ಚಂದ್ರ ಸಾಲ್ಯಾನ್, ಯಾಕೂಬ್ ಗುರುಪುರ, ಮೊಹಮ್ಮದ್ ಕುಂಡ್ ಅವನ್ನು ಅವನ್ನು ಸಮಾನಿಸಲಾಯಿತು. ಕ ಗುರುಪುರ ಕಂಬಳ ಸಮಿತಿ ವತಿಯಿಂದ ಡಿ.ಕೆ. ಸುರೇಶ್ ಅವರಿಗೆ ಚಿನ್ನದ ನೊಗ ಮತ್ತು ಬೆಳ್ಳಿಯ ಪಟ್ಟಿಯ ಕಂಬಳದ ಕೋಲು ನೀಡಿ ಗೌರವಿಸಲಾಯಿತು. ಆರ್ಥಿಕ ಸಮಸ್ಯೆ ಇರುವ ನೂರು ಕುಟುಂಬಕ್ಕೆ ಮದುವೆಗೆ ಒಟ್ಟು 25 ಲಕ್ಷರೂ. ನೆರವಿಬ ಹಸ್ತ ನೀಡಲಾಯಿತು. 177 ಜತೆ ಕೋಣಗಳು ಕಂಬಳದಲ್ಲಿ  ಭಾಗವಹಿಸಿದ್ದವು. 

ಚೇತನ್ ಪಿಲಿಕುಳ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article