ಕೀತಿ೯ನಗರದಲ್ಲಿ ಉಚಿತ ಶ್ರವಣ ತಪಾಸಣಾ ಶಿಬಿರ
ವಿಕಾಸ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆಯರಾಜ್ಯ ಉಪಾಧ್ಯಕ್ಷ ಡಾ. ಮಂದಾರ ರಾಜೇಶ್ ಭಟ್ ಅಧ್ಯಕ್ಷತೆ ವಹಿಸಿ ಪರಿಸರ ಸಂರಕ್ಷಣೆಯಲ್ಲಿ ನಮ್ಮ ಕೊಡುಗೆ ಅತೀ ಅಗತ್ಯ ಎಂದರು.
ಸನ್ಮಾನ: ಇದೇ ಸಂದಭ೯ದಲ್ಲಿ ಈಶ್ವರ್ ಮಲ್ಪೆ ಅವರನ್ನು ಸನ್ಮಾನಿಸಲಾಯಿತು.
ಕಾಯ೯ನಿರತ ಪತ್ರಕರ್ತರ ಸಂಘದ ರಾಜ್ಯ ಕಾಯ೯ಕಾರಿಣಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ರೋಟರಿ ಅಸಿಸ್ಟೆಂಟ್ ಗವನ೯ರ್ ಉಮೇಶ್ ರಾವ್ ಕೆ., ಕೀತಿ೯ನಗರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಉದಯಕುಮಾರ್, ಅರವಣ ತಜ್ಞರಾದ ಡಾ. ಅಂಕಿತಾ ಕಲ್ಮಾಡಿ ಅತಿಥಿಗಳಾಗಿ ಭಾಗವಹಿಸಿದ್ದರು.
ವರ್ಷ ಕ್ರಿಯೇಷನ್ಸ್ ನ ಸಿ.ಇ.ಒ ಹರೀಶ್ ಕೆ. ಆದೂರು ಸ್ವಾಗತಿಸಿದರು. ಟೀಂ ಈಶ್ವರ ಮಲ್ಪೆಯ ಸಂಚಾಲಕ ಲವ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದಲ್ಲಿ ಕಣ್ಣಿನ ತಪಾಸಣೆ ನಡೆಯುತ್ತಿರುತ್ತದೆ. ಕಣ್ಣು ಕಾಣಿಸದವರ ಬಗ್ಗೆ ಕನಿಕರ ತೋರಿಸುತ್ತೇವೆ ಆದರೆ ಕಿವಿ ಕೇಳಿಸದವರಿಗೆ ಗೌರವ ಇಲ್ಲದಂತ್ತಾಗಿದೆ. ಇದನ್ನೆಲ್ಲಾ ಗಮನಿಸಿ ಕಿವಿಯ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆನ್ನುವ ಉದ್ದೇಶದಿಂದ ಟೀಂ ಈಶ್ವರ ಮಲ್ಪೆಯಿಂದ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು 106 ಕ್ಯಾಂಪ್ ಗಳು ನಡೆದಿವೆ. ಕಿವಿಯ ಸಾಧನಗಳನ್ನು ತೆಗೆದುಕೊಳ್ಳಲು ಸರಕಾರದಿಂದ ಪರಹಾರ ಸಿಗುವುದಿಲ್ಲ ಇದನ್ನು ಮನಗಂಡ ಈಶ್ವರ್ ಅವರು ತಾನು ದುಡಿದದರಲ್ಲಿ ಶೇ 40ರಷ್ಪು ದೇಣಿಗೆಯನ್ನು ಮೀಸಲಿಟ್ಟಿದ್ದಾರೆ ಎಂದರು.
ಸೌಮ್ಯ ಕುಗ್ವೆ ಕಾಯ೯ಕ್ರಮ ನಿರೂಪಿಸಿದರು. ರೋಟರಿ ಟೆಂಪಲ್ ಟೌನ್ ನ ಅಧ್ಯಕ್ಷ ಹರೀಶ್ ಎಂ.ಕೆ. ವಂದಿಸಿದರು.
ಯಶ ಕರ್ನಾಟಕ ವಾರಪತ್ರಿಕೆ ಮತ್ತು ವಿಕಾಸ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ ನೇತೃತ್ವದಲ್ಲಿ, ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ಹಾಗೂ ಕೀರ್ತಿನಗರ ಅಭಿವೃದ್ಧಿ ಸಮಿತಿ ಸಹಕಾರದೊಂದಿಗೆ ತಪಾಸಣಾ ಶಿಬಿರ ನಡೆಯಿತು.
