ವಿದ್ಯಾಥಿ೯ಗಳು ಪ್ರಶ್ನಿಸುವ ಗುಣಗಳನ್ನು ಬೆಳೆಸಿಕೊಳ್ಳಿ: ರಾಜ್ಯಪಾಲ ಅಬ್ದುಲ್ ನಝೀರ್

ವಿದ್ಯಾಥಿ೯ಗಳು ಪ್ರಶ್ನಿಸುವ ಗುಣಗಳನ್ನು ಬೆಳೆಸಿಕೊಳ್ಳಿ: ರಾಜ್ಯಪಾಲ ಅಬ್ದುಲ್ ನಝೀರ್

ಪ್ರೇರಣಾ ಶಾಲೆಯ ಶತಮಾನೋತ್ಸವ


ಮೂಡುಬಿದಿರೆ: ವಿದ್ಯೆ ಮನುಷ್ಯನ ಅತ್ಯುತ್ತಮ ಆಭರಣ ಇದನ್ನು ಯಾರೂ ಕದಿಯಲಾರರು.ತಪ್ಪುಗಳು ನಿಮ್ಮ ಭವಿಷ್ಯವನ್ನು ನಿಧ೯ರಿಸುವುದಿಲ್ಲ ಆದ್ದರಿಂದ ನಿಮ್ಮಲ್ಲಿ ಮೂಡುವ ಸಂಶಯಗಳನ್ನು ಅಡಗಿಸಿಡುವ ಬದಲು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಿ ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟಿಸ್ ಅಬ್ದುಲ್ ನಜೀರ್ ವಿದ್ಯಾಥಿ೯ಗಳಿಗೆ ಕರೆಕೊಟ್ಟರು.


ಅವರು ಸೇವಾಂಜಲಿ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ವಿದ್ಯಾಭಾರತಿ ಸಂಯೋಜಿತ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 


ಶಿಕ್ಷಣ ಎಲ್ಲಾ ಶಿಕ್ಷಕರ ಶಿಕ್ಷಕ. ಆದ್ದರಿಂದ ತಪ್ಪು ಮಾಡುವ ಬಗ್ಗೆ ಭಯಪಡಬೇಡಿ ಕಲಿಕೆ, ಅಭ್ಯಾಸ ಮತ್ತು ತಾಳ್ಮೆಯ ಮೂಲಕ ಬೆಳೆಯಿರಿ ನಾವು ಪ್ರಗತಿಯ ಬಗ್ಗೆ ಗಮನಕೊಡಬೇಕು ಹೊರತು ಪರಿಪೂಣ೯ತೆಯ ಬಗ್ಗೆ ಅಲ್ಲ ಎಂದ ಅವರು ದಾನಿಗಳ ಸಹಕಾರದಿಂದ ಆಥಿ೯ಕವಾಗಿ ಹಿಂದುಳಿದಿರುವ ವಿದ್ಯಾಥಿ೯ಗಳಿಗೆ ಶಿಕ್ಷಣ ನೀಡುತ್ತಿರುವ ಬಗ್ಗೆ ಹಾಗೂ ಸಂಸ್ಥೆಯ ಅಭಿವೃದ್ಧಿಯ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. 


ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಂಸ್ಥೆಯು ನೂರರ ಸಂಭ್ರಮಾಚರಣೆ ನಡೆಯುತ್ತಿದ್ದರೂ ಆಥಿ೯ಕವಾಗಿ ನಿತ್ರಣದಲ್ಲಿದೆ. ಮಕ್ಕಳಿಗೆ ಸಂಸ್ಕಾರ ನೀಡಲು ಶಿಕ್ಷಣ ಸಂಸ್ಥೆಯನ್ನು ತೆರೆಯಲಾಗಿದೆ. ಸಮಾಜದ ಜನರಿಗೆ ಸಂಸ್ಕಾರ ನೀಡುವ ಉದ್ದೇಶದಿಂದ ಕಾಯಾ೯ಲಯವನ್ನು ತೆರೆಯಲು ಉದ್ದೇಶಿಸಲಾಗಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.


ಆರ್‌ಎಸ್‌ಎಸ್‌ನ ಪ್ರಾಂತಸಹಕಾರ್‍ಯವಾಹ ಪ್ರಕಾಶ್ ಪಿ. ಎಸ್ ಶುಭಾಸಂಸನೆಗೈದು ಜೀವನದ ಸವ೯ತೋಮುಖ ಬೆಳವಣಿಗೆಗೆ ಶಿಕ್ಷಣ ಮುಖ್ಯ. ದೇಶ ಸೇವೆ, ಸಮಾಜ ಸೇವೆ ಮತ್ತು ತಮ್ಮ ಏಳಿಗೆಗೆ ಸಮಸ್ಥಿತವಾದ ಚಿಂತನೆಯನ್ನು ಮಾಡಲು ಶಿಕ್ಷಣ ನೀಡಬೇಕಾದುದು ಸಮಾಜದ ಕತ೯ವ್ಯ. ಈ ನಿಟ್ಟಿನಲ್ಲಿ ಪ್ರೇರಣಾ ಸಂಸ್ಥೆ ಶಿಕ್ಷಣ ನೀಡುತ್ತಿದೆ ಎಂದರು.

ಶಾಲಾ ಸಂಚಾಲಕ ಶಾಂತಾರಾಮ ಕುಡ್ವ ಅಧ್ಯಕ್ಷತೆ ವಹಿಸಲಿದ್ದರು.

ಸನ್ಮಾನ: ಶಾಲೆಯ ಹಳೆಯ ವಿದ್ಯಾರ್ಥಿ ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟಿಸ್ ಅಬ್ದುಲ್ ನಜೀರ್ ಅವರನ್ನು, ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎಂಆರ್‌ಜಿ ಗ್ರೂಫ್‌ನ ಡಾ. ಪ್ರಕಾಶ್ ಶೆಟ್ಟಿ, ಉದ್ಯಮಿ, ಶಂಕರ್ ಎಲೆಕ್ಟ್ರಿಕಲ್ಸ್ ಕಂ ಪ್ರೈವೇಟ್ ಲಿ. ನ ರಾಜೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. 

ಗೌರವ: ಶಾಲಾ ಸಂಸ್ಥಾಪಕರ ಪರವಾಗಿ ಮೇರಿ ಡಿ'ಸೋಜ, ನಿವೃತ್ತ ಮುಖ್ಯ ಶಿಕ್ಷಕರಾದ ಆಂಡ್ರೂ ಸೆರಾವೋ, ಜಯರಾಜ್ ಜೈನ್, ಜಯರಾಮ್ ರಾವ್ ಅವರನ್ನು ಗೌರವಿಸಲಾಯಿತು. 

ಸಾಧಕರಿಗೆ ಸನ್ಮಾನ: ರಾಷ್ಟ್ರೀಯ ಕ್ರೀಡಾಪಟು ಪ್ರೀತಿ, ಭಗವದ್ಗೀತೆ ಕಂಠಪಾಠದಲ್ಲಿ ರಾಜ್ಯಮಟ್ಟದಲ್ಲಿ ಸ್ಪಧಿ೯ಸಿರುವ ಪ್ರಧಾನ್ ಆರ್. ಭಂಡಾರಿ ಮತ್ತು ಮನಸ್ವಿ ಶಮ೯ ಅವರನ್ನು ಸನ್ಮಾನಿಸಲಾಯಿತು. 

ದಾನಿಗಳಿಗೆ ಸನ್ಮಾನ: ಉದ್ಯಮಿ, ಶ್ರೀ ವೆಂಕಟರಮಣ ಹನುಮಂತ ದೇವಳದ ಆಡಳಿತ ಮೊಕ್ತೇಸರ ಉಮೇಶ್ ಪೈ ಮತ್ತು ಗೀತಾ ವಿಜಯ ಕಾಮತ್ ಅವರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಸೋಮನಾಥ ಕೋಟ್ಯಾನ್, ಕಾರ್ಯದರ್ಶಿ ಕೇಶವ ಹೆಗ್ಡೆ, ಕೋಶಾಧಿಕಾರಿ ಎಸ್ ಎನ್ ಬೋರ್ಕರ್ ಮತ್ತಿತರರು ಈ ಸಂದಭ೯ದಲ್ಲಿದ್ದರು.

ಟ್ರಸ್ಟ್ ನ ಅಧ್ಯಕ್ಷ ರಾಜೇಶ್ ಎಂ. ಬಂಗೇರಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರೋಹನ್ ಅತಿಕಾರಬೆಟ್ಟು ಕಾಯ೯ಕ್ರಮ ನಿರೂಪಿಸಿದರು.ಶಿಕ್ಷಕಿ ವತ್ಸಲಾ ರಾಜೇಶ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article