ಸಾರ್ವಜನಿಕ ರಕ್ತದಾನ ಶಿಬಿರ

ಸಾರ್ವಜನಿಕ ರಕ್ತದಾನ ಶಿಬಿರ


ಗುರುಪುರ: ಫ್ರೆಂಡ್ಸ್ ಸರ್ಕಲ್ ಕೆಳಗಿನಕೆರೆ (ರಿ.) ಅಡ್ಡೂರು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಜಂಟಿ ಆಶ್ರಯದಲ್ಲಿ ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆ ಇದರ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರ ರವಿವಾರ ಅಡ್ಡೂರಿನ ಸರ್ಕಾರಿ ಶಾಲೆಯಲ್ಲಿ ನಡೆಯಿತು.


ದುಆ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಡ್ಡೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಸದಖತುಲ್ಲಾ ಫೈಝಿ, ಮಾನವನ ಜೀವ ಉಳಿಸುವ ರಕ್ತದಾನವು ಮಹಾದಾನವಾಗಿದ್ದು, ಇದಕ್ಕಿಂತ ಮಿಗಿಲಾದ ಸೇವೆ ಇನ್ನೊಂದಿಲ್ಲ.   ರಕ್ತದಾನ ಜೀವ ಉಳಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಬಾದ್ಯತೆಯನ್ನು ನಿರ್ವಹಿಸುತ್ತದೆ. ಯುವ ಸಮೂಹ ಸಾಮಾಜ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಮಾನವ ಜನಾಂಗದ ಬದುಕಿನ ಸಂರಕ್ಷಣೆಯಲ್ಲಿ ಮುಖ್ಯ  ಪಾತ್ರವಹಿಸಬೇಕು ಎಂದು ಹೇಳಿದರು.


ಶಿಬಿರದಲ್ಲಿ 82 ಮಂದಿ ರಕ್ತದಾನ ಮಾಡಿದರು. ಈ ಸಂದರ್ಭ ಬ್ಲಡ್ ಹೆಲ್ಪ್ ಲೈನ್ ಕಾರ್ಯನಿರ್ವಾಹಕ ನಿಝಾಮ್ ತೋಕೂರು ಹಾಗೂ ರಿಫಾ ಕ್ಲಿನಿಕ್ ಸಹಾಯಕ ಸಿಬ್ಬಂದಿ ಅಬ್ದುಲ್ ರೆಹ್ಮಾನ್ ಅವರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. 


ಕಾರ್ಯಕ್ರಮದಲ್ಲಿ ರಕ್ತನಿಧಿ ಸಿಬ್ಬಂದಿ ಕೆಎಂಸಿ ವೈದ್ಯೆ ಡಾ. ಋತ್ವಿ, ಡಾ.ಇ.ಕೆ. ಸಿದ್ದೀಕ್, ಬಿಜೆಎಂ ಅಧ್ಯಕ್ಷ ಅಹ್ಮದ್ ಬಾವ ಅಂಗಡಿಮನೆ, ಜಿ.ಪಂ.ಮಾಜಿ ಸದಸ್ಯ ಯು.ಪಿ.ಇಬ್ರಾಹೀಂ, ಗುರುಪುರ ಗ್ರಾ.ಪಂ.ಸದಸ್ಯರಾದ ಎ.ಕೆ.ಅಶ್ರಫ್, ಸಾಹಿಕ್ ಪಾಂಡೇಲ್, ಎಫ್ ಸಿಕೆ  ಅಧ್ಯಕ್ಷ ಹಾರೀಸ್, ಗೌರವಾಧ್ಯಕ್ಷ ಯಾಕೂಬ್ ಕೆಳಗಿನಕೆರೆ, ಸಿದ್ದೀಕ್ ಕೆಳಗಿನಕೆರೆ, ಮುಸ್ತಫಾ ದೆಮ್ಮಲೆ, ಹಮೀದ್ ಕಡೆ ತೋಟ, ಮಜೀದ್, ಮನ್ಸೂರ್, ತೌಸೀಫ್ ಕೆಳಗಿನಕೆರೆ, ಹಂಝ ಕೆಳಗಿನಕೆರೆ, ಗೌಸ್, ಮುಹಿಯುದ್ದೀನ್, ಉಸ್ಮಾನ್, ಮತ್ತಿತರರು ಉಪಸ್ಥಿತರಿದ್ದರು.


ಅಸ್ತಾರ್ ಅಡ್ಡೂರು ಕಾರ್ಯಕ್ರಮ ನಿರೂಪಿಸಿದರು. ಬ್ಲಡ್ ಹೆಲ್ಪ್ ಲೈನ್ ಕಾರ್ಯನಿರ್ವಾಹಕ ಇಮ್ರಾನ್ ಅಡ್ಡೂರು ವಂದಿಸಿದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article