ಬಳ್ಕುಂಜೆಯಲ್ಲಿ ಕುದಿ ಕಂಬಳ: ಹೊಳೆಗೆ ಹಾರಿ ಪ್ರಾಣಬಿಟ್ಟ ದೂಜ

ಬಳ್ಕುಂಜೆಯಲ್ಲಿ ಕುದಿ ಕಂಬಳ: ಹೊಳೆಗೆ ಹಾರಿ ಪ್ರಾಣಬಿಟ್ಟ ದೂಜ


ಮೂಡುಬಿದಿರೆ: ಕಂಬಳದ ಕನೆ ಹಲಗೆ ವಿಭಾಗದಲ್ಲಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿದ್ದ ತಿರುವೈಲು ಗುತ್ತುವಿನ ದೂಜ ಹೆಸರಿನ ಕೋಣವು ಭಾನುವಾರ ಶಾಂಭವಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದೆ. 

ಬಳ್ಕುಂಜೆ  ಕಂಬಳದ ರೂವಾರಿ ಮಲ್ಲಿಕಾ ಯಶವಂತ ಶೆಟ್ಪಿ ತನ್ನ ಜತೆ ಇರುವ ಕಂಬಳದ ಕೋಣಕ್ಕೆ ಜೊತೆ ಮಾಡಿಸಲು ತಿರುವೈಲು ಗುತ್ತುವಿನ ಕಂಬಳದ ಕೋಣ ದೂಜನನ್ನು ತರಿಸಿ ಭಾನುವಾರ ಕೋಟ್ನಾಯ ಗುತ್ತುವಿನಲ್ಲಿ   ಕುದಿ  ಕಂಬಳವನ್ನು ಏಪ೯ಡಿಸಿದ್ದರು.

ಭಟ್ಕಳದ ಕಂಬಳ ಓಟಗಾರ ಕುದಿ ಕಂಬಳದ ಕರೆಗೆ ಕೋಣಗಳನ್ನು ಇಳಿಸಿದ್ದು ಈ ಸಂದಭ೯ ಕೋಣಗಳು ಹಾಯಲು ಬಂದ ರೀತಿಯಲ್ಲಿ ಓಡಲು ಯತ್ನಿಸಿದಾಗ ಓಟಗಾರ ಜಾರಿ ಬಿದ್ದಿದ್ದಾರೆ. ಆದರೆ ಕೋಣಗಳು ತಮ್ಮನ್ನು ತಡೆಯಲು ಬಂದ ಜನರ ಕೈಗೆ ಸಿಗದೆ ಏರ್ರಾಬಿರ್ರಿಯಾಗಿ ತೋಟದ ಮಧ್ಯೆ ಓಡಿ ಜುಮಾದಿ ದೈವಸ್ಥಾನದ ಬಳಿ ಸ್ವಲ್ಷ ನಿಂತು ಮತ್ತೆ ಓಡಿದ ಜೋಡೆತ್ತುಗಳು ಶಾಂಭವಿ ನದಿಗೆ ಹಾರಿದೆ ಈ ಸಂದಭ೯ದಲ್ಲಿ ದೂಜ ಪ್ರಾಣ ಕಳೆದುಕೊಂಡರೆ ಅದರ ಜತೆಯಲ್ಲಿದ್ದ ಇನ್ನೊಂದು ಕೋಣ ಮೇಲಕ್ಕೆ ಬಂದಿದೆ.

ಬಳ್ಕುಂಜೆ ಕಂಬಳ ಸಂಘಟಕಿ ಮಲ್ಲಿಕಾ ಯಶವಂತ ಶೆಟ್ಟಿ ಅವರು ಕಳೆದ ಮೂರು ವಷ೯ಗಳಿಂದ ಕಂಬಳವನ್ನು ನಡೆಸುತ್ತಾ ಬಂದಿದ್ದಾರೆ. ಆದರೆ ಸ್ಥಳೀಯರು ಮಾತನಾಡಿಕೊಳ್ಳುವ ಪ್ರಕಾರ ಮಲ್ಲಿಕಾ ಅವರು ಸ್ವಲ್ಪ ದಿನಗಳ ಹಿಂದೆ ದೈವದ ಕಲದಲ್ಲಿ ಎದುರು ನಿಂತು " ಈ ನಿನ್ನ ಉರಿನ್ ತೂಪಾವೆಂದ್ ಪನ್ಪತಾ ಏಪ ನಿನ್ನ ಉರಿ ತೋಜಾವುನು" ಎಂದು ದೈವಕ್ಕೆ ಸವಾಲು ಹಾಕಿದ್ದು ಇದೀಗ ದೈವ ತನ್ನ ಉರಿಯನ್ನು ತೋರಿಸಿಕೊಟ್ಟಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ದೂಜ ಪ್ರಾಣ ಕಳೆದುಕೊಂಡ ಬಗ್ಗೆ ಕಂಬಳದ ಅಭಿಮಾನಿಗಳಿಗೆ ನೋವಿತ್ತಾದರೂ ಯಾರ ವಾಟ್ಸಪ್ ಸ್ಟೇಟಸ್ ಹಾಗೂ ಕಂಬಳ ಗ್ರೂಪಿನಲ್ಲಿ ಈ ಸುದ್ಧಿ ನಿನ್ನೆ ರಾತ್ರಿವರೆಗೆ ವೈರಲ್ ಆಗಿಲ್ಲವೆನ್ನಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article