ಪುತ್ತಿಗೆ: ಚರಂಡಿಗೆ ಬಿದ್ದು ವ್ಯಕ್ತಿ ಸಾವು
Wednesday, April 29, 2026
ಮೂಡುಬಿದಿರೆ: ಪುತ್ತಿಗೆ ಮಜ್ಜಿಗುರಿಯಲ್ಲಿರುವ ತನ್ನ ಸಹೋದರಿ ಮನೆಗೆ ಬಂದಿದ್ದ ವ್ಯಕ್ತಿಯೋವ೯ರು ಚರಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಬುಧವಾರ ಅಪರಾಹ್ನ ಪುತ್ತಿಗೆ ಪದವಿನಲ್ಲಿ ನಡೆದಿದೆ.
ಮಂಗಳೂರು ಕೊಣಾಜೆ ನಿವಾಸಿ ಮಾಧವ (45) ಸಾವನ್ನಪ್ಪಿದ ವ್ಯಕ್ತಿ.
ಮಾಧವ ಅವರು ಪುತ್ತಿಗೆ ದೇವಸ್ಥಾನದ ಜಾತ್ರೆಗೆಂದು ಅಕ್ಕನ ಮನೆಗೆ ಬಂದಿದ್ದು ಜಾತ್ರೆ ಮುಗಿಸಿ ಇಂದು ಮಧ್ಯಾಹ್ನದ ವೇಳೆ ಹಿಂತಿರುಗಿ ಮಂಗಳೂರಿಗೆ ಹೊರಟಿದ್ದರು. ಆದರೆ ಸಂಜೆ ವೇಳೆಗೆ ಅವರ ಮೃತ ದೇಹ ಪುತ್ತಿಗೆ ಯುವಕ ಮಂಡಲದ ಬಳಿಯ ಚರಂಡಿಯಲ್ಲಿ ಪತ್ತೆಯಾಗಿದೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕುಸಿದು ಬಿದ್ದು ಸಾವನ್ನಪ್ಪಿರಬಹುದೆಂದು ಶಂಕೆ ವ್ಯಕ್ತ ಪಡಿಸಿದ್ದಾರೆ.