ಮಾರೂರು ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವರ ಪುನ: ಪ್ರತಿಷ್ಠೆ, ಆಕಾಶದೆತ್ತರದಲ್ಲಿ ಕಾಣಿಸಿಕೊಂಡ ಗರುಡ
ಋತ್ವಿಜ ಸಮೂಹದ ಹರಿಭಟ್ ಭಟ್ ಮತ್ತು ಮುಂಡ್ಕೂರಿನ ರಾಧಾಕೃಷ್ಣ ನಾವಡರು ಶಿಖರ ಪ್ರತಿಷ್ಠೆ ನೆರವೇರಿಸಿದರು.
ಮಿತ್ತಬೆಟ್ಟು ಕುಟುಂಬಸ್ಥರು ವಾಯುವ್ಯ ದಿಕ್ಕಿನಲ್ಲಿ ನಿಮಿ೯ಸಿಲಾಗಿರುವ ಶ್ರೀ ಗಣಪತಿ ಪ್ರತಿಷ್ಠಾ ವಿಧಿವಿಧಾನವನ್ನು ಬ್ರಹ್ಮಶ್ರೀ ಮುರಳೀಧರ ತಂತ್ರಿ ಮತ್ತು ವೆಂಕಟೇಶ್ ತಂತ್ರಿಯವರು ನೆರವೇರಿಸಿದರು.
ಈ ಸಂದಭ೯ದಲ್ಲಿ ಆಕಾಶದೆತ್ತರದಲ್ಲಿ ಗರುಡನ ಆಗಮನವಾಗಿ ಭಕ್ತರ ಭಕ್ತಿಗೆ ಪಾತ್ರವಾಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ಹೊಸಂಗಡಿ ಅರಮನೆಯ ಸಂಪತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಬ್ರಹ್ಮ ಕಲಶೋತ್ಸವ ಸಮಿತಿಯ ಕಾಯ೯ಧ್ಯಕ್ಷ ಮಾರೂರು ಗುತ್ತು ಶಂಭು ಎನ್. ಶೆಟ್ಪಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎ. ಜೀವಾಂಧರ ಕುಮಾರ್, ಜೀಣೋ೯ದ್ಧಾರ ಸಮಿತಿಯ ಅಧ್ಯಕ್ಷ ಕೆ. ಶ್ರೀಪತಿ ಭಟ್, ವೇದಮೂತಿ೯ ಮಾರೂರು ಖಂಡಿಗ ರಾಮದಾಸ ಅಸ್ರಣ್ಣ, ಪ್ರಧಾನ ಅಚ೯ಕ ವೇದಮೂತಿ೯ ವೆಂಕಟರಾಜ ಅಸ್ರಣ್ಣ, ಮುಂಬಯಿ ಸಮಿತಿಯ ಅಧ್ಯಕ್ಷ ಮಾರೂರು ಗುತ್ತು ಬೋಜ ಎನ್. ಶೆಟ್ಟಿ, ಬ್ರಹ್ಮಕಲಶೋತ್ಸವ ಮತ್ತು ಜೀಣೋ೯ದ್ಧಾರ ಸಮಿತಿಯ ಉಪಾಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು, ಒಂಭತ್ತು ಮಾಗಣೆಗಳಿಂದ ಆಗಮಿಸಿದ ಭಕ್ತರು ಈ ಸಂದಭ೯ದಲ್ಲಿದ್ದರು.

