ಮುಲ್ಕಿ ತಾಲೂಕು ಆಡಳಿತ ಪ್ರಜಾಸೌಧದಲ್ಲಿ "ಸೇವಕ ಕಚೇರಿ" ಆರಂಭ
ಕಟೀಲು ಕ್ಷೇತ್ರದ ಅರ್ಚಕರಾದ ವೇದಮೂರ್ತಿ ಹರಿನಾರಾಯಣ ದಾಸ ಆಸ್ರಣ್ಣ ದೀಪ ಬೆಳಗಿಸಿ ಶಾಸಕರ ಸೇವಕ ಕಚೇರಿ ಉದ್ಘಾಟಿಸಿ ಆಶೀರ್ವಚನ ನೀಡಿ ಸೇವಾ ಕಚೇರಿಯ ಮೂಲಕ ಶಾಸಕರಿಂದ ಜನಮನ್ನಣೆಯ ಕಾರ್ಯಗಳು ನಡೆದು ಪ್ರಜೆಗಳ ಪ್ರೀತಿ ಗಳಿಸಲಿ ಜನಸಾಮಾನ್ಯರ ಬದುಕು ಹಸನಾಗಲಿ ಎಂದು ಶುಭ ಹಾರೈಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಸೇವಕ ಕಚೇರಿಯಲ್ಲಿ ವಾರದ ಪ್ರತೀ ಶನಿವಾರ ತಾನು ಉಪಸ್ಥಿತನಿದ್ದು ಜನರ ಸೇವೆಗೆ ಸದಾ ಬದ್ಧನಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ಜ್ಯೋತಿಷಿ ವಿಶ್ವನಾಥ ಭಟ್, ಮುಲ್ಕಿ ತಾಲೂಕು ತಹಶಿಲ್ದಾರ್ ಶ್ರೀಧರ ಮುಂದಲಮನಿ, ಉಪತಹಶಿಲ್ದಾರ್ ದಿಲೀಪ್ ರೋಡ್ಕರ್, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್, ಉದ್ಯಮಿ ಶರತ್ ಸಾಲ್ಯಾನ್ ಬೆಂಗಳೂರು, ಬಿಜೆಪಿ ನಾಯಕರಾದ ಮೇಘನಾಥ ಶೆಟ್ಟಿ, ಬಾಹುಬಲಿ ಪ್ರಸಾದ್ ಮೂಡುಬಿದಿರೆ, ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವ, ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು, ರಂಗನಾಥ ಶೆಟ್ಟಿ, ವಿನೋದ್ ಸಾಲ್ಯಾನ್ ಬೆಳ್ಳಾಯರು, ಡಾ. ಹರಿಶ್ಚಂದ್ರ ಪಿ ಸಾಲ್ಯಾನ್, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು, ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಮಧುಕರ್,ಮಾಜಿ ಅಧ್ಯಕ್ಷ ಸತೀಶ್ ಅಂಚನ್, ಮಾಜೀ ಸದಸ್ಯ ಪುತ್ತು ಬಾವ, ರಾಮಚಂದ್ರ ನಾಯ್ಕ ಕೋಲ್ನಾಡ್ ಗುತ್ತು, ಪಾಂಡುರಂಗ ಭಟ್ ಎಸ್ ವಿ ಟಿ. ಮುಲ್ಕಿ, ಈಶ್ವರ ಕಟೀಲು, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ,ಮುಲ್ಕಿ ಬಿಲ್ಲವ ಸಂಘದ ಗೌರವಾಧ್ಯಕ್ಷ ಗೋಪಿನಾಥ ಪಡಂಗ, ಜೀವನ್ ಶೆಟ್ಟಿ ಕಾರ್ನಾಡ್, ದೇವಿಪ್ರಸಾದ್ ಕೆಂಪುಗುಡ್ಡೆ, ಲಕ್ಷ್ಮಣ ಸಾಲ್ಯಾನ್ ಪುನರೂರು, ಮಂಡಲ ಕಾಯ೯ದಶಿ೯ ರಂಜಿತ್ ಪೂಜಾರಿ ತೊಡಾರ್, ಸಂಜೀವ ದೇವಾಡಿಗ ಬಪ್ಪನಾಡು, ಪುಷ್ಪರಾಜ ಶೆಟ್ಟಿ ಚೇಳಾಯರು, ಮನೋಹರ ಕೋಟ್ಯಾನ್, ಹರ್ಷರಾಜ ಶೆಟ್ಟಿ, ಪುರುಷೋತ್ತಮ ಬಡಗುಹಿತ್ಲು, ಸ್ಟೇನಿ ಪಿಂಟೋ ಕಿನ್ನಿಗೋಳಿ, ನವೀನ್ ರಾಜ್, ಜೀವನ್ ಶೆಟ್ಟಿ ಅಂಗರಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ ಕಾಯ೯ಕ್ರಮ ನಿರೂಪಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಅವರ ಸೇವಕ ನೂತನ ಕಚೇರಿಯ ಉದ್ಘಾಟನೆ ಸಂದರ್ಭ ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಶುಭಹಾರೈಸಿದ್ದಾರೆ.
ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಯವರು ಶಾಸಕ ಉಮಾನಾಥ ಕೋಟ್ಯಾನ್ ರವರಿಗೆ ಮೊಬೈಲ್ ವಿಡಿಯೋ ಕಾಲ್ ಮೂಲಕ ಮಾತನಾಡಿ ಕಚೇರಿಯಲ್ಲಿ ಶಾಸಕರು ಜನರ ಸೇವೆ ಮೂಲಕ ಉತ್ತಮ ಕಾರ್ಯ ನಡೆಸಲಿ ಹಾಗೂ ಜನರ ಸಮಸ್ಯೆಗಳು ಶಾಸಕರ ಮುಖಾಂತರ ಪರಿಹಾರವಾಗಿ ಕ್ಷೇತ್ರದ ಅಭಿವೃದ್ಧಿ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕರಾದ ರಜನಿಸಿ ಭಟ್, ರಾಹುಲ್ ಚಂದ್ರಶೇಖರ್ ಸಂಚಾಲಕ ಪುನೀತ್ ಕೃಷ್ಣ ಉಪಸ್ಥಿತರಿದ್ದರು.
