ನಾಳೆ ಕಣಚೂರು ಸಮೂಹ ಸಂಸ್ಥೆಗಳ ಪದವಿ ಪ್ರಧಾನ, ರಾಜ್ಯಕ್ಕೆ ಚಿನ್ನ ಗಳಿಸಿದ ನರ್ಸಿಂಗ್ ವಿದ್ಯಾರ್ಥಿನಿ

ನಾಳೆ ಕಣಚೂರು ಸಮೂಹ ಸಂಸ್ಥೆಗಳ ಪದವಿ ಪ್ರಧಾನ, ರಾಜ್ಯಕ್ಕೆ ಚಿನ್ನ ಗಳಿಸಿದ ನರ್ಸಿಂಗ್ ವಿದ್ಯಾರ್ಥಿನಿ


ಉಳ್ಳಾಲ: ಕಣಚೂರು ಸಮೂಹ ಶಿಕ್ಷಣ ಸಂಸ್ಥೆಗಳ 2026ನೇ ಸಾಲಿನ ಪದವಿ ಪ್ರದಾನ ಸಮಾರಂಭವು ಏಪ್ರಿಲ್ 25ರ ಶನಿವಾರದಂದು ಬೆಳಗ್ಗೆ 10 ಗಂಟೆಗೆ ಸಂಸ್ಥೆಯ 'ಕಣಚೂರು ಕಾನ್ಫರೆನ್ಸ್ ಡೋಮ್'ನಲ್ಲಿ ನಡೆಯಲಿದೆ ಎಂದು ಕಣಚೂರು ಕಾಲೇಜಿನ ಫಿಸಿಯೋಥೆರಪಿ ವಿಭಾಗದ ಪ್ಪ್ರಾಂಶುಪಾಲ ಮೊಹಮ್ಮದ್ ಸುಹೈಲ್ ತಿಳಿಸಿದರು.

ಅವರು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್ ಜಿ ಯು ಹೆಚ್ ಎಸ್) ನಡೆಸಿದ ಅಂತಿಮ ವರ್ಷದ ಬಿ.ಎಸ್ಸಿ ನರ್ಸಿಂಗ್ ಪರೀಕ್ಷೆಯಲ್ಲಿ ಕಣಚೂರು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ರಂಜಿನಿ ವಿ. ಅವರು ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ರಾಜ್ಯದ ಸುಮಾರು 680 ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳ ಪೈಕಿ ಈ ಅತ್ಯುನ್ನತ ಸಾಧನೆ ಮಾಡಿರುವುದು ವಿಶೇಷ. ಇವರ ಜೊತೆಗೆ ನರ್ಸಿಂಗ್ ವಿಭಾಗದಲ್ಲಿ ಒಟ್ಟು 14 ರ‍್ಯಾಂಕ್‌ಗಳು ಲಭಿಸಿವೆ ಎಂದರು.

ಫಿಸಿಯೋಥೆರಪಿ ವಿಭಾಗದಲ್ಲಿ ಎಂ.ಪಿ.ಟಿ ವಿದ್ಯಾರ್ಥಿನಿ ಡಾ. ಚಾಟಿ ಮಂಜುಷಾ ಸಂಜಯ್ ಅವರು ವಿಶ್ವವಿದ್ಯಾಲಯಕ್ಕೆ 1ನೇ ರ‍್ಯಾಂಕ್ ಪಡೆದರೆ, ಬಿ.ಪಿ.ಟಿ ವಿಭಾಗದಲ್ಲಿ ಡಾ. ಸರ್ವಾಂಕರ್ ವಿಘ್ನೇಶ್ ವಿಜಯ್ ಅವರು ಸಮಗ್ರವಾಗಿ 2ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಅಲ್ಲದೆ, ಅಲೈಡ್ ಹೆಲ್ತ್ ಸೈನ್ಸ್‌ನ ವಿವಿಧ ವಿಭಾಗಗಳಲ್ಲಿ ಹಲವು ವಿದ್ಯಾರ್ಥಿಗಳು ಅಗ್ರ ಹತ್ತು ರ‍್ಯಾಂಕ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದರು. 

ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಡಾ. ಬಿ. ಎಲ್. ಸುಜಾತಾ ರಾಥೋಡ್ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪದವಿ ಪ್ರದಾನ ಮಾಡಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮಿತ್ರ ಮತ್ತು ಆರೋಗ್ಯ ರಕ್ಷಣಾ ಮಂಡಳಿಯ ಅಧ್ಯಕ್ಷರಾದ ಡಾ. ಯು. ಟಿ. ಇಫ್ತಿಕಾರ್ ಫರೀದ್ ಪಾಲ್ಗೊಳ್ಳಲಿದ್ದಾರೆ. ಕಣಚೂರು ಇಸ್ಲಾಮಿಕ್ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಹಾಜಿ ಯು. ಕೆ. ಮೋನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

2016ರಲ್ಲಿ ಸ್ಥಾಪನೆಯಾದ ಕಣಚೂರು ನರ್ಸಿಂಗ್ ಸಂಸ್ಥೆಯು ಇದೀಗ ತನ್ನ ಹತ್ತನೇ ಬ್ಯಾಚ್‌ನ 250 ವಿದ್ಯಾರ್ಥಿಗಳನ್ನು ವೃತ್ತಿಜೀವನಕ್ಕೆ ಕಳುಹಿಸಿಕೊಡುತ್ತಿದ್ದು, ದಶಮಾನೋತ್ಸವದ ಸಾರ್ಥಕತೆಯಲ್ಲಿದೆ. ಈ ವರ್ಷ ಸಂಸ್ಥೆಯ ವಿವಿಧ ವಿಭಾಗಗಳಿಂದ ಒಟ್ಟು 291 ಪದವೀಧರರು ಹೊರಹೊಮ್ಮುತ್ತಿದ್ದಾರೆ ಎಂದರು.

ಕಣಚೂರು ವೈದ್ಯಕೀಯ ಕಾಲೇಜಿನ ಡೀನ್ ಡಾ. ಶಹನವಾಜ್ ಮಣಿಪಾಡಿ, ಕಣಚೂರು ನರ್ಸಿಂಗ್ ವಿಭಾಗದ ಪ್ರಾಂಶುಪಾಲೆ ಡಾ. ಮೋಲಿ ಸಲ್ದಾನ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article