ದ್ವೇಷ ದೂರವಿಟ್ಟು ಪರಸ್ಪರ ಪ್ರೀತಿಯಿಂದ ಬದುಕುವುದೇ ನಿಜವಾದ ಬ್ರಹ್ಮಕಲಶೋತ್ಸವ: ಒಡಿಯೂರುಶ್ರೀ
ಶ್ರೀ ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಆಶೀವ೯ಚನ ನೀಡಿ ಧರ್ಮ ನಮ್ಮ ಜೀವನ ಪಯಣದ ರಾಜರಸ್ತೆಯಾಗಿದ್ದು, ತ್ಯಾಗ ಮನೋಭಾವದಿಂದ ಮಾತ್ರ ನೆಮ್ಮದಿಯನ್ನು ಮರಳಿ ಪಡೆಯಲು ಸಾಧ್ಯ. ದ್ವೇಷಗಳನ್ನು ದೂರವಿಟ್ಟು ಪರಸ್ಪರ ಪ್ರೀತಿಯಿಂದ ಜೀವಿಸುವುದೇ ನಿಜವಾದ ಬ್ರಹ್ಮಕಲಶೋತ್ಸವ ಎಂದು ನುಡಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿ ಮುಂಬೈ ಘಟಕದ ಗೌರವಾಧ್ಯಕ್ಷ ಇರುವೈಲು ದೊಡ್ಡಗುತ್ತು ಭುಜಂಗ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ವೈಬ್ರೆಂಟ್ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ನಾಯಕ್, ಹೊಸಂಗಡಿ ಅರಮನೆ ಸುಕುಮಾರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಮುಂಬೈ ಘಟಕದ ಅಧ್ಯಕ್ಷ ಮಾರೂರುಗುತ್ತು ಭೋಜ ಎನ್. ಶೆಟ್ಟಿ, ಪೆರಿಂಜೆ ಮದಕುಡೆ ದಿನಕರ ಶೆಟ್ಟಿ, ಮುಂಬೈ ವಿಶ್ವಾಸ್ ಕೆಮಿಕಲ್ ಸಂಸ್ಥೆಯ ವಿವೇಕ್ ಶೆಟ್ಟಿ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎ. ಜೀವಂಧರ ಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಶ್ರೀಪತಿ ಭಟ್, ಕಾರ್ಯಾಧ್ಯಕ್ಷ ಮಾರೂರುಗುತ್ತು ಶಂಭು ಎನ್. ಶೆಟ್ಟಿ, ಮಾರೂರು ಖಂಡಿಗ ರಾಮದಾಸ ಆಸ್ರಣ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮುಂಬೈ ಸಮಿತಿಯ ಗೌರವಾಧ್ಯಕ್ಷ ಇರುವೈಲು ಭುಜಂಗ ಆರ್. ಶೆಟ್ಟಿ, ಅಧ್ಯಕ್ಷ ಭೋಜ ಎನ್. ಶೆಟ್ಟಿ ಮತ್ತು ಗೀತಾ ಶೆಟ್ಟಿ ದಂಪತಿ, ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ವಿಶ್ವಾಸ್ ಕೆಮಿಕಲ್ ಸಂಸ್ಥೆಯ ವಿವೇಕ್ ಶೆಟ್ಟಿ, ಅದಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಮಾರೂರುಗುತ್ತು ವಿಶ್ವನಾಥ ಶೆಟ್ಟಿ, ಪೆರಿಂಜೆ ಮದಕುಡೆ ದಿನಕರ ಶೆಟ್ಟಿ, ವಿಮಲಾ ಸೇರಿಗಾರ್ತಿ, ರಮಣಿ ಅಣ್ಣಿ ಶೆಟ್ಟಿ ಹಾಗೂ ಮುಂಬೈ ಹೋಟೆಲ್ ಉದ್ಯಮಿ ಸದಾಶಿವ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಕೆ. ಶೆಟ್ಟಿ, ಉಪಾಧ್ಯಕ್ಷ ಮಿತ್ತಬೆಟ್ಟುಗುತ್ತು ಸುಧಾಕರ ಶೆಟ್ಟಿ, ಕಾರ್ಯದರ್ಶಿ ಸುನಿಲ್ ಕುಮಾರ್ ಶೆಟ್ಟಿ, ರವಿರಾಜ್ ಪಾಂಡಿಬೆಟ್ಟು, ರವಿ ಪೂಜಾರಿ, ದಿಲೀಪ್ ಶೆಟ್ಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಶ್ರೀಪತಿ ಭಟ್ ಸ್ವಾಗತಿಸಿದರು. ಧನಂಜಯ ಮೂಡುಬಿದಿರೆ ನಿರೂಪಿಸಿದರು. ಶಂಕರ್ ಎ. ಕೋಟ್ಯಾನ್ ವಂದಿಸಿದರು.