ಕಲ್ಲಮುಂಡ್ಕೂರು: ಉದ್ಯಮಿ, ಕ್ರೀಡಾಪಟು ಗಣೇಶ್ ಕಾಮತ್ ನಿಧನ

ಕಲ್ಲಮುಂಡ್ಕೂರು: ಉದ್ಯಮಿ, ಕ್ರೀಡಾಪಟು ಗಣೇಶ್ ಕಾಮತ್ ನಿಧನ


ಮೂಡುಬಿದಿರೆ: ಕಲ್ಲಮುಂಡ್ಕೂರು ರವಿದಾಸ್ ಕಾಮತ್ ಪುತ್ರ, ಕಾಮತ್ ಜನರಲ್ ಸ್ಟೋರ್ ಮಾಲಕ ಗಣೇಶ್ ಕಾಮತ್ (52) ಗುರುವಾರ ಬೆಳಗ್ಗೆ ನಿಧನರಾದರು. 

ಕಲ್ಲಮುಂಡ್ಕೂರಿನಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಗಣೇಶ್ ಕಾಮತ್  ಅವರು  ಪತ್ರಿಕೆಯ ಏಜೆಂಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು. 

ದಾನಿಯಾಗಿದ್ದ ಅವರು ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.  ರಾಜ್ಯಮಟ್ಟದ ಶಾಟ್ ಫುಟ್ ಕ್ರೀಡಾಪಟು, ಈಟಿ ಎಸೆತಗಾರನಾಗಿದ್ದ ಏಕಲವ್ಯ ಸ್ಪೋಟ್ಸ್೯ ಕ್ಲಬ್ ನಲ್ಲಿ  ತರಬೇತಿ ಪಡೆದಿದ್ದರು.

ಮೃತರು ತಾಯಿ, ಪತ್ನಿ, ಪುತ್ರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article