ಸಮ್ಮೇದ ಶಿಖರ್ಜಿಯಲ್ಲಿ ಸಿದ್ದಕೂಟ ವಂದನೆ ಸಲ್ಲಿಸಿದ ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ
ಆಚಾರ್ಯ ವಸುನಂದಿ ಮಹಾರಾಜ್ ಅವರ ಪಂಚಕಲ್ಯಾಣ ಹಾಗೂ ಆಚಾರ್ಯ ಪ್ರಮಾಣಸಾಗರ ಮಹಾರಾಜ್ ಅವರ ಶಂಕಾ ಸಮಾಧಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ದೆಹಲಿಯ ಕುಂದ ಕುಂದ ಭಾರತಿ ಜೈನ ಕೇಂದ್ರದಲ್ಲಿ ಜರುಗಿದ ಸ್ವರ್ಗೀಯ ಶ್ವೇತ ಪಿಂಚಾಚಾರ್ಯ 108 ವಿದ್ಯಾನಂದ ಮುನಿ ಮಹಾರಾಜ್ ಅವರ 101ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಸ್ವಾಮೀಜಿ ಪಾಲ್ಗೊಂಡರು.
ಆಶೀರ್ವಚನ ನೀಡಿದ ಶ್ರೀಗಳು, ಆಚಾರ್ಯ ವಿದ್ಯಾನಂದ ಮುನಿಗಳು ಉತ್ತರ ಮತ್ತು ದಕ್ಷಿಣ ಭಾರತದ ಹೆಚ್ಚಿನ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರಕ್ಕೆ ಮಹತ್ತರ ಪ್ರೇರಣೆ ನೀಡಿದವರು ಎಂದು ಸ್ಮರಿಸಿದರು. ಅನೇಕ ರಾಷ್ಟಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರು ರಾಷ್ಟ್ರಸಂತರಾಗಿ ಗುರುತಿಸಿಕೊಂಡಿದ್ದಾರೆ ಹಾಗೂ ಅವರ ಪ್ರವಚನ ಸಂದೇಶಗಳು ಜನಮಾನಸದಲ್ಲಿ ಲೋಕಪ್ರಿಯವಾಗಿವೆ ಎಂದರು.
ಆಚಾರ್ಯ ಶ್ರುತಸಾಗರ ಮುನಿ ಮಹಾರಾಜ್, ಹಸ್ತಿನಾಪುರದ ರವೀಂದ್ರಕೀರ್ತಿ ಸ್ವಾಮೀಜಿ, ತಿಜಾರದ ಸೌರಭ್‌ಸೇನ ಸ್ವಾಮೀಜಿ, ಟ್ರಸ್ಟ್ ಅಧ್ಯಕ್ಷ ಸತೀಶ್ ಜೈನ್, ಮಹಾಮಂತ್ರಿ ಅನಿಲ್ ಜೈನ್ ಹಾಗೂ ಅರ್ಜುನ್ ಜೈನ್, ವಿದ್ವಾಂಸ ಪ್ರೊ. ಅನೇಕಾಂತ ಜೈನ್, ಡಾ. ವೀರಸಾಗರ ಜೈನ್ ಮತ್ತಿತರರಿದ್ದರು.