ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿ ‘ಡಿಜಿಟಲ್ ಕಾಲಘಟ್ಟದಲ್ಲಿ ಮಾಧ್ಯಮ ವಿಚಾರಸಂಕಿರಣ

ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿ ‘ಡಿಜಿಟಲ್ ಕಾಲಘಟ್ಟದಲ್ಲಿ ಮಾಧ್ಯಮ ವಿಚಾರಸಂಕಿರಣ


ಮೂಡುಬಿದಿರೆ: ‘ಅರ್ಹ ಕೌಶಲಗಳನ್ನು ಹೊಂದಿದ ವಿದ್ಯಾರ್ಥಿಗಳಿಗೆ ಮಾಧ್ಯಮದಲ್ಲಿ ಔದ್ಯೋಗಿಕ ಅವಕಾಶಗಳು ಹೆಚ್ಚಿವೆ. ಆದರೆ, ಸೂಕ್ತ ಶಿಕ್ಷಣ ಹಾಗೂ ತರಬೇತಿಯನ್ನು ಪಡೆದಿರಬೇಕು’ ಎಂದು ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು.

ಆಳ್ವಾಸ್ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ವಿವಿಧ ಕಾಲೇಜುಗಳ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ‘ಡಿಜಿಟಲ್ ಕಾಲಘಟ್ಟದಲ್ಲಿ ಮಾಧ್ಯಮ’ ಎಂಬ ವಿಚಾರಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪ್ರಸ್ತುತ ಔದ್ಯೋಗಿಕ ಬೇಡಿಕೆಗೆ ಅನುಗುಣವಾದ ಶಿಕ್ಷಣವನ್ನು ಪಡೆದರೆ, ಉದ್ಯೋಗದ ಅವಕಾಶ ಹೆಚ್ಚುತ್ತದೆ. ಆಳ್ವಾಸ್ ಕಾಲೇಜಿನಲ್ಲಿ ‘ಮಾಧ್ಯಮ’ ಶಿಕ್ಷಣವು ಅತ್ಯುತ್ತಮವಾಗಿದ್ದು, ಪ್ರಾಯೋಗಿಕ ಅವಕಾಶಗಳು ವಿಫುಲವಾಗಿವೆ. ಧನಾತ್ಮಕ ಧೋರಣೆಯನ್ನು ಸೃಜಿಸುವಲ್ಲಿ ಆಳ್ವಾಸ್ ಕೊಡುಗೆ ಅನನ್ಯವಾಗಿದೆ ಎಂದರು.

ಮುದ್ರಣ ಮಾಧ್ಯಮ, ಟೆಲಿವಿಷನ್ ಮಾಧ್ಯಮ, ರೇಡಿಯೊ ಹಾಗೂ ಡಿಜಿಟಲ್ ಮಾಧ್ಯಮದ ಪ್ರಾಯೋಗಿಕ ತರಗತಿಗಳನ್ನು ತಜ್ಞರು ನಡೆಸಿಕೊಟ್ಟರು.

ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬನ್ನಡ್ಕ ವಿಶ್ವವಿದ್ಯಾನಿಲಯ ಕಾಲೇಜು, ಮೂಡುಬಿದಿರೆ ಮಹಾವೀರ ಕಾಲೇಜು, ಕಟೀಲು ಎಸ್‌ಡಿಟಿ ಪ್ರಥಮ ದರ್ಜೆ ಕಾಲೇಜು ಹಾಗೂ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ವಿಚಾರಸಂಕಿರಣದಲ್ಲಿ ಪಾಲ್ಗೊಂಡರು.

ಆಳ್ವಾಸ್ ಸ್ವಾಯತ್ತ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ನಾರಾಯಣ ಶೆಟ್ಟಿ ಮಾತನಾಡಿ, ‘ಡಿಜಿಟಲ್ ವೇದಿಕೆಗೆ ವಿದ್ಯಾರ್ಥಿಗಳು ಅಪ್‌ಡೇಟ್ ಆಗಬೇಕಾಗಿರುವುದು ಇಂದಿನ ಅನಿವಾರ್ಯತೆ. ಅಂತಹ ಮೂಲಸೌಕರ್ಯ ಹೊಂದಿದ ಕಾಲೇಜಿನಲ್ಲಿ ಶಿಕ್ಷಣ ಪಡೆದೆ, ಉದ್ಯೋಗದ ಸಾಧ್ಯತೆಗಳು ಹೆಚ್ಚು’ ಎಂದರು.

ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಮಾತನಾಡಿ, ಸಮಕಾಲೀನ ಮಾಧ್ಯಮದ ಅವಶ್ಯಕತೆಗೆ ಅನುಗುಣವಾಗಿ ತರಬೇತಿ ಪಡೆಯಲು ಇರುವ ಅವಕಾಶಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮ ಸಂಯೋಜಕ ಹರ್ಷವರ್ಧನ ಪಿ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, ವಿಚಾರಸಂಕಿರಣ ರೂಪುರೇಷೆ ಹಾಗೂ ಅವಶ್ಯಕತೆ ಬಗ್ಗೆ ತಿಳಿಸಿದರು.

ವಿಭಾಗದ ಪ್ರಾಧ್ಯಾಪಕರಾದ ಡಾ.ಶ್ರೀನಿವಾಸ ಹೊಡೆಯಾಲ, ದೀಕ್ಷಿತಾ, ಅಕ್ಷಯ್ ಕುಮಾರ್, ಹನ್ನಾ ಫಾತಿಮಾ ತರಬೇತಿ ನೀಡಿದರು.

ವಿದ್ಯಾರ್ಥಿನಿಯರಾದ ರಕ್ಷಿತಾ ಚಪ್ಪರಿಕೆ ಮತ್ತು ಪ್ರೇರಣಾ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article