"ಸ್ವಚ್ಛ ಸರ್ವೇಕ್ಷಣೆ" ಸ್ವಚ್ಛತೆಯ ಸಮೀಕ್ಷೆ
ಇದರ ಸದುಪಯೋಗವನ್ನು ಪಡೆದುಕೊಂಡು ಮೂಡುಬಿದಿರೆಯ ಎಲ್ಲಾ ಜನಸಾಮಾನ್ಯರು ತಕ್ಷಣವೇ ತಮ್ಮ ಸ್ಮಾರ್ಟ್ ಮೊಬೈಲ್ ನಿಂದ ಕೆಳಗಿನ QR ಕೋಡ್ ಸ್ಕ್ಯಾನ್ ಮಾಡುವ ಮುಖಾಂತರ ಅಥವಾ https://cf.sbmurban.org/ ವೆಬ್ ಲಿಂಕ್ ಬಳಸುವ ಮುಖಾಂತರ ಬಹುಆಯ್ಕೆಯ ಹಲವು ಸರಳ ಪ್ರಶ್ನೆಗಳನ್ನು ಕೇವಲ 2 ನಿಮಿಷಗಳ ಸಮಯದಲ್ಲಿ ಉತ್ತರಿಸಿ ಮೂಡುಬಿದಿರೆ ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯದ ಕುರಿತಾದ ತಮ್ಮ ನೈಜ ಅಭಿಪ್ರಾಯವನ್ನು ದಾಖಲಿಸಿ, ಮೂಡುಬಿದಿರೆ ನಗರವನ್ನು ಸ್ವಚ್ಛತೆಯ ಮಾನದಂಡದಲ್ಲಿ ಮುಂಚೂಣಿಯಾಗಿಸಲು ಸಹಕರಿಸುವ ಅವಕಾಶವಿದೆ.
ಆದುದರಿಂದ ಈ ಅವಕಾಶವನ್ನು ಮೂಡುಬಿದಿರೆ ಪುರಸಭೆಯ ಎಲ್ಲಾ ನಾಗರಿಕರು ಕಡ್ಡಾಯವಾಗಿ ಬಳಸಿಕೊಂಡು ಪುರಸಭೆಗೆ ಸಹಕರಿಸುವಂತೆ ಹಾಗೂ ಇದರೊಂದಿಗೆ ಕಸವನ್ನು ಹಸಿ ಕಸ, ಒಣ ಕಸ, ಅಪಾಯಕಾರಿ ಕಸ, ಹಾನಿಕಾರಕ ಕಸವಾಗಿ ವಿಂಗಡಿಸುವುದು, ಸಾರ್ವಜನಿಕ ಸ್ಥಳಗಳಾದ ಮಾರುಕಟ್ಟೆ, ಬಸ್ ನಿಲ್ದಾಣ, ಉದ್ಯಾನವನ, ಸಾರ್ವಜನಿಕ ಶೌಚಾಲಯ, ಧಾರ್ಮಿಕ ಕ್ಷೇತ್ರಗಳು, ಮನೆಯ ಪ್ರದೇಶಗಳು, ಇತರೆಡೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಅಭ್ಯಾಸ ರೂಢಿಸಿಕೊಂಡು; ಮನೆಯಿಂದಲೇ ಬಟ್ಟೆಯ ಚೀಲಗಳನ್ನು ತರುವ ಅಭ್ಯಾಸದೊಂದಿಗೆ ಭಾಗಿಯಾಗಲು ಮೂಡುಬಿದಿರೆ ಪುರಸಭೆಯ ಮುಖ್ಯಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.