ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ


ಮೂಡುಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ  ಹಿನ್ನೆಲೆಯಲ್ಲಿ ಏಪ್ರಿಲ್ 17 ರಿಂದ 21 ರವರೆಗೆ ವೈಭವದ ವಜ್ರಮಹೋತ್ಸವದ ವಿವಿಧ ಕಾಯ೯ಕ್ರಮಗಳು ನಡೆಯಲಿದ್ದು ಶುಕ್ರವಾರ ಸಂಜೆ ಸಮಾಜ ಮಂದಿರದ ಆವರಣದಿಂದ ಶ್ರೀ ಮಹಾವೀರ ಕಾಲೇಜುವರೆಗೆ ಮೆರವಣಿಗೆ ನಡೆಯಿತು. 


ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ, ಮಾಜಿ ಸಚಿವ  ಕೆ. ಅಭಯಚಂದ್ರ ಜೈನ್ ಮತ್ತು ಎಂಸಿಎಸ್ ಬ್ಯಾಂಕಿನ ವಿಶೇಷ ಕತ೯ವ್ಯಾಧಿಕಾರಿ ಚಂದ್ರಶೇಖರ ಎಂ. ಮೆರವಣಿಗೆಗೆ ಚಾಲನೆ ನೀಡಿದರು. 


ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಕೋಶಾಧಿಕಾರಿ ರಾಮ್ ಪ್ರಸಾದ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್, ಕಾಯ೯ದಶಿ೯ ರಮೇಶ್ ಭಟ್, ಕಾರ್ಯಾಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಮತ್ತು ಪದಾಧಿಕಾರಿಗಳು, ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ, ಪ.ಪೂ. ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷ್ಮೀ ಮಾಲ೯, ಸಮಾಜ ಮಂದಿರ ಸಭಾದ ಪ್ರಧಾನ ಕಾರ್ಯದರ್ಶಿ ಸುರೇಶ್ ಪ್ರಭು, ವಿದ್ಯಾಥಿ೯ ಸಂಘದ ಅಧ್ಯಕ್ಷೆ ಸಾಕ್ಷಿ ಎಸ್. ಶೆಟ್ಟಿ, ಪ್ರ. ಕಾಯ೯ದಶಿ೯ ನವ್ಯ, ಉಪನ್ಯಾಸಕರುಗಳು, ಬೋಧಕ ಮತ್ತು ಬೋಧಕೇತರ ಸಿಬಂದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.








Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article